ಬಂಟ್ವಾಳ: ಶ್ರೀ ಅರಸು ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ಕಾಲಾವಧಿ ವಲಸರಿ ನೇಮ ಎ.28ನೇ ಆದಿತ್ಯವಾರ ನಡೆಯಲಿದೆ. ಎ.22ನೇ ಸೋಮವಾರ ಬೆಳಿಗ್ಗೆ 9.30ಕ್ಕೆ ಗೊನೆ ಮುಹೂರ್ತ, ಹಾಗೂ ಎ.28ನೇ ಆದಿತ್ಯವಾರ ಬೆಳಿಗ್ಗೆ 9ಕ್ಕೆ ಮಾಣಿಗುತ್ತಿನಿಂದ ದೈವದ ಭಂಡರ ಹೊರಟು, 10ಕ್ಕೆ ಬದಿಗುಡ್ಡೆ ವಾರಾಟ ಮಾಡಕ್ಕೆ ಬರುವುದು.


ಬೆಳಿಗ್ಗೆ 11ಕ್ಕೆ ಗಣಹೋಮ, ಪ್ರತಿಷ್ಠಾ ದಿನಾಚರಣೆಯ ಸಲುವಾಗಿ ದೈವಗಳಿಗೆ ತಂಬಿಲ ಸೇವೆ, ಹೂವಿನ ಪೂಜೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9 ಘಂಟೆಯಿಂದ ಶ್ರೀ ಅರಸು ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ ಬಂಟೆದಿ ಮಲೆಕೊರತಿ ದೈವಗಳ ವಲಸರಿ ನೇಮೋತ್ಸವ ವಿಶೇಷ ಸುಡುಮದ್ದು ಪ್ರದರ್ಶನ ಹಾಗೂ ಮರುದಿನ ಬೆಳಿಗ್ಗೆ 6 ಘಂಟೆಗೆ ಶ್ರೀ ದೈವಗಳ ಭಂಡಾರ ನಿರ್ಗಮನ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.