ಬಂಟ್ವಾಳ: ಬಿಸಿರೋಡ್ ಸರ್ವೀಸ್ ರಸ್ತೆಯಲ್ಲಿ ಕುಡಿಯುವ ನೀರಿ ಪೈಪ್ ಹೊಡೆದು ಹೋದ ಪರಿಣಾಮ ಕ್ರತಕ ನೆರೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕ ರು ಪುರಸಭೆಗೆ ಹಿಡಿಶಾಪ ಹಾಕಿದ್ದಾರೆ.


ಸರ್ವೀಸ್ ರಸ್ತೆಯಲ್ಲಿ ಕಳೆದ ವಾರ ಕುಡಿಯವ ನೀರಿನ ಪೈಪ್ ಲೈನ್ ಕೆಲಸ ವನ್ನು ಪುರಸಭೆ ಯವರು ಕೈಗೊಂಡಿದ್ದರು.
ಅ ಬಳಿಕ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ವೇಳೆ ಕುಡಿಯುವ ನೀರಿನ ಪೈಪ್ ಹೊಡೆದುಹೋಗಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿತ್ತು.
ಒಂದು ಕಡೆಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ.
ಇನ್ನೊಂದು ಕಡೆಯಿಂದ ಪೋಲಾಗುತ್ತಿರುವ ನೀರು ಇದೆಲ್ಲವೂ ಅಧಿಕಾರಿಗಳ ಆಡಳಿತ ಯಂತ್ರದಲ್ಲಿನ ಬಿಕ್ಕಟ್ಟುಗಳು ಎನ್ನಲಾಗುತ್ತದೆ.
ಪೈಪ್ ಲೈನ್ ಹೊಡೆದುಹೋಗಿ ನೀರು ಪೋಲಾಗುತ್ತಿದೆ, ಕೂಡಲೇ ಗೇಟ್ ವಾಲ್ ಬಂದ್ ಮಾಡುವಂತೆ ಮಾಜಿ ಪುರಸಭಾ ಸದಸ್ಯೆ ಯಶೋದ ಅವರು ಪುರಸಭೆಯ ಅಧಿಕಾಗಳಿಗೆ ಮೌಖಿಕವಾಗಿ ತಿಳಿಸಿದರು ಕೂಡಾ ಪುರಸಭೆಯ ಅಧಿಕಾರಿಗಳು ತಾಸುಗಟ್ಟಲೆ ಸ್ಥಳಕ್ಕೆ ಬರಲೇ ಇಲ್ಲ. ಮತ್ತೆ ಕೂಡಾ ನೀರು ಪೋಲಾಗುತ್ತಲೆ ಇತ್ತು.
ಸರ್ವೀಸ್ ರಸ್ತೆಯಲ್ಲಿರುವ ಅಂಗಡಿಗಳಿಗೂ ನೀರು ನುಗ್ಗಿದೆ.