Monday, February 2, 2026

ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುವ ಆತಂಕದಲ್ಲಿ ಜನತೆ

ಬಂಟ್ವಾಳ: ಕೊರೊನಾ ವೈರಸ್ ಸೊಂಕು ಹರಡುವ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರ ತೆಗೆದುಕೊಂಡ ಮಹತ್ವದ ನಿರ್ಣಯ ಲಾಕ್ ಡೌನ್. ಖಂಡಿತವಾಗಿಯೂ ಲಾಕ್ ಡೌನ್ ನಿಂದಾಗಿ ಕೊರೊನಾ ಕಂಟ್ರೋಲ್ ಗೆ ಬರುತ್ತಿದೆ ಎಂಬುದು ವಾಸ್ತವಿಕ ವಿಚಾರ. ಅದರೆ ಇಲ್ಲೇನಪ್ಪ ವಿಚಾರ ಅಂದರೆ ಲಾಕ್ ಡೌನ್ ನಿಂದಾಗಿ ಅನೇಕ ರಸ್ತೆ ಕಾಮಗಾರಿ ಸಹಿತ ಅನೇಕ ಸರಕಾರಿ ಕಾಮಗಾರಿಗಳು ನಿಂತಿದೆ.

ಅದರಲ್ಲಿ ಬಂಟ್ವಾಳ- ಕಡೂರು ರಸ್ತೆ ಕಾಮಗಾರಿ: 
ಬಿ.ಸಿ.ರೋಡನಿಂದ ಪುಂಜಾಲಕಟ್ಟೆ ವರಗೆ 159 ಕೋಟಿ ವೆಚ್ಚದಲ್ಲಿ ಸುಮಾರು 19 ಕಿ.ಮೀ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿತ್ತು. ಈ ವರ್ಷದ ಮಳೆಗಾಲ ಆರಂಭದ ಮೊದಲು ರಸ್ತೆಯನ್ನು ಸಂಚಾರಕ್ಕೆ ಅವಕಾಶ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ಇವರ ಕಾಮಗಾರಿಗೆ ಬ್ರೇಕ್ ಹಾಕಿತ್ತು. ಸಮಸ್ಯೆ ಆರಂಭವಾದದ್ದು ಅಲ್ಲಿಂದಲೇ. ಲಾಕ್ ಡೌನ್ ನಿಂದಾಗಿ ಕಾಮಗಾರಿ ನಿಂತಿತ್ತು. ಆದರೆ ಇಂದಿನಿಂದ ಮತ್ತೆ ತಡೆಗೋಡೆ ಕಾಮಗಾರಿಗಳ ಸಹಿತ ಸಣ್ಣಪುಟ್ಟ ರಸ್ತೆಯ ಕಾಮಗಾರಿಗಳಿಗೆ ವೇಗ ದೊರೆತಿದೆ.
ಆದರೆ ಮಳೆ ಆರಂಭವಾದ್ದರಿಂದ ಕಾಮಗಾರಿ ಅತೀ ವೇಗವಾಗಿ ಮುಗಿಯಬೇಕಾಗಿದೆ. ಇಲ್ಲದೆ ಹೋದರೆ ರಸ್ತೆ ಬದಿಯಲ್ಲಿರುವ ಮನೆಗಳಿಗೆ, ಅಂಗಡಿಗಳಿಗೆ ಮಳೆ ನೀರು ನುಗ್ಗುವುದು ಗ್ಯಾರಂಟಿ ಅದಕ್ಕೆ ಅನುಮಾನವೇ ಬೇಡ. ಯಾಕೆಂದರೆ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಅನೇಕ ಮನೆಗಳು, ಅಂಗಡಿಗಳು ರಸ್ತೆಯಿಂದ ಕೆಳಭಾಗದಲ್ಲಿರುವುದರಿಂದ ನೀರು ನುಗ್ಗುವ ಆತಂಕದಲ್ಲಿ ಜನರು ಇದ್ದಾರೆ.
ಕೆಲವೆಡೆಗಳಲ್ಲಿ ಕೃಷಿ ಭೂಮಿಗೂ ನೀರು ನುಗ್ಗುವ ಅವಕಾಶಗಳಿವೆ. ಹಾಗಾಗಿ ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಮುಗಿಸಲು ಸಾಧ್ಯವಾಗದಿದ್ದರೆ ಕನಿಷ್ಟ ಪಕ್ಷ ಚರಂಡಿ ನಿರ್ಮಿಸಿ ಮಳೆ ನೀರು ಮನೆಯಂಗಳಕ್ಕೆ ನುಗ್ಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಕೆಲವು ಕಡೆಗಳಲ್ಲಿ ರಸ್ತೆಯಲ್ಲಿರುವ ಚರಂಡಿಗಳನ್ನು ಮುಚ್ಚಲಾಗಿ ಅಡ್ಡಲಾಗಿ ಮಣ್ಣು ರಾಶಿ ಹಾಕಲಾಗಿದೆ. ಇದರಿಂದ ಮನೆಯೊಳಗೆ ನೀರು ನುಗುತ್ತದೆ ಎಂಬ ಆರೋಪದ ಜೊತೆಯಲ್ಲಿ ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ನೀರು ನುಗ್ಗಿದರೆ ಮನೆಯನ್ನು ಕಳೆದುಕೊಂಡು ಬೀದಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಬಹುದು ಅದಕ್ಕೆ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

More from the blog

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

ಮಂಗಳೂರು ಕರಾವಳಿಯನ್ನು ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಸಂಸದ ಕ್ಯಾ. ಚೌಟ ಮನವಿ

ನವದೆಹಲಿ: ಭಾರತದ ಗ್ರೀನ್‌ ಎನರ್ಜಿ ಸ್ವಾವಲಂಬನೆ ಮತ್ತು ಬಂದರು ಆಧಾರಿತ ಅಭಿವೃದ್ಧಿ ಕಾರ್ಯತಂತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಗಳೂರು ಕಡಲ ತೀರದಲ್ಲಿ ‘ಕಡಲ ಪವನ ಶಕ್ತಿ’ ('ಸಮುದ್ರ ತೀರದ ಪವನ ಶಕ್ತಿ' Offshore Wind Energy)...

ಅಂಗಡಿ, ಹೋಟೆಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ದರ್ಶನ್ ಎಚ್. ವಿ

ಮಂಗಳೂರು : ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿಗಳು ಹೋಟೇಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ಹೆಸರನ್ನು ನಾಮಫಲಕಗಳಲ್ಲಿ ಕನ್ನಡದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ...

Panemangaluru : ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಸ್ಕೂಟರ್ ಸವಾರ ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ...