ನೇರಳಕಟ್ಟೆ: ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ ವತಿಯಿಂದ ಮಾಸ್ಟರ್ ಮೈಂಡ್ ಎಂಟರ್ ಪ್ರೈಸಸ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸಂಘದ, ಆಡಳಿತ ಮಂಡಳಿಯವರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ” ಕೌಶಲ್ಯ ಅಭಿವೃದ್ದಿ ಮತ್ತು ವ್ಯಕ್ತಿತ್ವ ವಿಕಸನದ ” ಬಗ್ಗೆ ತರಬೇತಿ ಕಾರ್ಯಗಾರವು ನಡೆಯಿತು.



ಸಂಘದ, ಉಪಾಧ್ಯಕ್ಷರಾದ ಶ್ರೀ ತನಿಯಪ್ಪ ಗೌಡ ದಾಸಕೇೂಡಿ ಇವರು ಕಾರ್ಯಗಾರವನ್ನು ಉದ್ಘಾಟಿಸಿದರು. ಮಾಸ್ಟರ್ ಮೈಂಡ್ ಎಂಟರ್ ಪ್ರೈಸಸ್ ನ ಸಂಪನ್ಮೂಲ ವ್ಯಕ್ತಿಗಳಾದ, ಶ್ರೀಶಾ K.M ಮತ್ತು ವನಮಾಲಿ ಹೆಬ್ಬಾರ್ ರವರು ತರಬೇತಿಯನ್ನು ನೀಡಿದರು.

ತರಬೇತಿಯ ಕೊನೆಯಲ್ಲಿ ಸಂಘದ ಅಧ್ಯಕ್ಷರಾದ, ಪುಷ್ಪರಾಜ ಚೌಟರವರು ತರಬೇತಿದಾರರನ್ನು ಗೌರವಿಸಿದರು. ಸಂಘದ ನಿರ್ದೇಶಕರಾದ, ಶ್ರೀ ಅಶೇೂಕ್ ರೈ, ಶ್ರೀ ಅರುಣ್ ಕುಮಾರ್, ಶ್ರೀ ಶ್ರೀನಿವಾಸ ಪೂಜಾರಿ, ಶ್ರೀ ವೆಂಕಟೇಶ್ ಕೊಟ್ಯಾನ್, ಶ್ರೀ ಸಂಕಪ್ಪ ಜೆ. ಶ್ರೀ ಸನತ್ ಕುಮಾರ್ ರೈ, ಶ್ರೀಮತಿ ಶಕಿಲ ಕೃಷ್ಣ ಪೂಜಾರಿ, ಶ್ರೀಮತಿ ಭಾರತಿ ಯವರು ಉಪಸ್ಥಿತಿ ಇದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಶೇೂಧ ಬಿ. ಯವರು ಸ್ವಾಗತಿಸಿ, ಗುಮಾಸ್ತರಾದ ರವಿ ಎನ್. ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.












