ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್‌ನಲ್ಲಿ ಸಂಚಾರಿ ಸಾರಿಗೆ ಸುರಕ್ಷಾ ಬಸ್‌ನಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.


ಗ್ರಾ.ಪಂ. ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ಹೆಗ್ಡೆ, ಉದ್ಯಮಿ ಹರೀಂದ್ರ ಪೈ, ಬಂಟ್ವಾಳ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪಂ.ಅ.ಅಧಿಕಾರಿ ಯಮುನಪ್ಪ ಕೊರವರ್, ಗ್ರಾ.ಪಂ.ಸದಸ್ಯರಾದ ಯೋಗೇಂದ್ರ ಕುಮಂಗಿಲ, ಕಾಂತಪ್ಪ ಕರ್ಕೇರ, ಶಾರದಾ ನಾಯ್ಕ, ಪ್ರಮುಖರಾದ ಸರೋಜಾ ಶೆಟ್ಟಿ, ಪ್ರಕಾಶ್ ರಾವ್, ಹರೀಶ್ ಶೆಟ್ಟಿ ಕುಮಂಗಿಲ, ಶಿಲ್ಪಾ ಐಶ್ವರ್ಯ ಪೈ, ಇರ್ವತ್ತೂರು ಗ್ರಾ.ಪಂ.ಸದಸ್ಯ ದಯಾನಂದ ಎರ್ಮೆನಾಡು, ಸಾರಿಗೆ ಸುರಕ್ಷಾ ಬಸ್ ವೈದ್ಯರು, ಸಿಬಂದಿ, ಆರೋಗ್ಯ ಇಲಾಖೆ ಸಿಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತಿತರರು ಉಪಸ್ಥಿತರಿದ್ದರು.

