Sunday, January 25, 2026

ಶ್ರೀಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ

ಬಂಟ್ವಾಳ: ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ನಾವೂರು ಇದರ 9 ದಿನಗಳ ಕಾಲ ನಡೆದ ವಿಜ್ರಂಭಣೆಯ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮ ಕ್ಕೆ ಇಂದು ತೆರೆ ಕಂಡಿತು.

ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಾಯರ ನೇತ್ರತ್ವದಲ್ಲಿ ವೈದಿಕ ವಿಧಿವಿದಾನಗಳೊಂದಿಗೆ ಭಕ್ತಸಾಗರದ ಮಧ್ಯೆ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.
ಬೆಳಿಗ್ಗೆ ಗಂಟೆ 5 ರಿಂದ ಮಹಾಗಣಪತಿ ಹೋಮ, ಕವಾಟ ಉದ್ಘಾಟನೆ, ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ ಶಾಂತಿ , ತತ್ವ ಹೋಮಗಳ ಕಲಾಶಾಭಿಷೇಕ, ಮಹಾಬಲಿ ಪೀಠ ಪ್ರತಿಷ್ಠೆ ಬಳಿಕ ದೇವರಿಗೆ ಕಲಾಶಾಭಿಷೇಕ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂದ ತೀರ್ಥ ಎನ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಮುರಳೀದರ ಭಟ್, ಆಡಳಿತ ಮೊಕ್ತೇಶರ ರಾಮಚಂದ್ರ ಭಟ್, ಪ್ರಧಾನ ಅರ್ಚಕ ವೆಂಕಟದಾಸ ಭಟ್ ಪ್ರಧಾನ ಅರ್ಚಕ, ಪ್ರಧಾನ ಕಾರ್ಯದರ್ಶಿ ಸದಾನಂದ ಹಳೆಗೇಟು ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ಕೋಶಾಧಿಕಾರಿ ಗೋಪಾಲ ಸಪಲ್ಯ ನೂಜಿ, ಗೌರವಾಧ್ಯಕ್ಷ ಗಂಗಾಧರ ವಿ.ಪೂಜಾರಿ ಅಮೈ ಗುತ್ತು, ಪ್ರಮುಖ ರಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಸುರಶ್ ನಾವೂರ, ರಾಮಚಂದ್ರ ಗೌಡ ಮಣಿ, ಕರುಣೇಂದ್ರ ಪೂಜಾರಿ, ರಾಮ್ ದಾಸ ಬಂಟ್ವಾಳ, ಹರಿಶ್ಚಂದ್ರ ಭಟ್ ಮಜಲು ಎಲ್ಲಾ ಸಮಿತಿಯ ಪ್ರಮುಖರು ಹಾಗೂ ಊರಿನ ಭಕ್ತರು ಪೂಜೆಯಲ್ಲಿ ಭಾಗವಹಸಿ ದೇವರ ಪ್ರಸಾದ ಸ್ವೀಕರಿಸಿದರು.

More from the blog

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ – ಕೆ.ಪಿ.ಎಸ್ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ ದಕ್ಷಿಣ ಕನ್ನಡ...

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ..

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಶತರುದ್ರಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಂತ್ರಿಗಳಾದ ದಿನೇಶ್‌ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಪುಣ್ಯಾಹ, ಗಣಹೋಮ, ಶತರುದ್ರಾಭಿಷೇಕ, ನವಕ ಕಲಶಾಭಿಷೇಕ, ವೀರಾಂಜನೇಯ...