ನವರಾತ್ರಿ ಹಬ್ಬ ಎಂದರೆ ಒಂಬತ್ತು ದಿನಗಳಲ್ಲಿ ದೇವಿಯ ವಿಶೇಷ ಪೂಜೆ ಊರಿನಲ್ಲಿ ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ದೇವರಿಗೆ ವಿಶೇಷ ವಿಭಿನ್ನ ರೀತಿಯ ಹೂವಿನ ಅಲಂಕಾರ ಮಾಡುವ ಪದ್ದತಿ ನಡೆದುಕೊಂಡು ಬಂದಿದೆ.
ಹಾಗಾಗಿ ಹೂವಿನ ವ್ಯಾಪಾರ ವೂ ಬಲು ಜೋರಾಗಿ ನಡೆಯುತ್ತದೆ. ದ.ಕ.ಜಿಲ್ಲೆಗೆ ಊರ ಪರ ಊರಿನ ಅದೆಷ್ಟೋ ಹೂವಿನ ವ್ಯಾಪಾರಿಗಳು ಸೀಸನ್ ವೈಸ್ ಬರುವುದು ವಾಡಿಕೆಯಾಗಿ ಬಿಟ್ಟಿದೆ.

ಈ ಬಾರಿ ಯ ನವರಾತ್ರಿ ಹಬ್ಬಕ್ಕೆ ಕುಶಾಲನಗರ ಅಭಿಷೇಕ್ ಎನ್ನುವ ರಿಕ್ಷಾ ಚಾಲಕರು ಬಿಸಿರೋಡಿಗೆ ಹೂವು ವ್ಯಾಪಾರಕ್ಕೆಂದು ಬಂದಿದ್ದಾರೆ.

ಇಲ್ಲೇನು ವಿಶೇಷ ಅಂದರೆ ಇವರು ರಿಕ್ಷಾ ಚಾಲಕರಾಗಿದ್ದು ಸ್ವಂತ ರಿಕ್ಷಾ ಇದೆ.
ಇದೇ ರಿಕ್ಷಾದಲ್ಲಿ ಅಲಂಕಾರದ ರೀತಿಯಲ್ಲಿ ಹೂವನ್ನು ಹಾಕಿಕೊಂಡು ವ್ಯಾಪಾರ ಮಾಡಲು ಬಿಸಿರೋಡಿಗೆ ಬಂದಿದ್ದಾರೆ. ಕಳೆದ ಐದು ವರ್ಷಗಳಿಂದ ವ್ಯಾಪಾರ ತೊಡಗಿರುವ ಇವರು ಇಂತಹ ಹಬ್ಬ ದ ಸಮಯದಲ್ಲಿ ಮಾತ್ರ ಊರಿ ನಿಂದ ಊರಿಗೆ ರಿಕ್ಷಾದಲ್ಲೆ ಪ್ರಯಾಣ ಬೆಳೆಸಿ ವ್ಯಾಪಾರ ಮಾಡುತ್ತಾರೆ. ರೈತನ ಕೈಯಿಂದ ನೇರವಾಗಿ ಅತೀ ಕಡಿಮೆ ದರದಲ್ಲಿ ಗುಣಮಟ್ಟದ ಹೂ ಗ್ರಾಹಕನ ಕೈ ಸೇರಬೇಕು ಎಂಬುದು ಇವರ ಉದ್ದೇಶವಾಗಿದೆ ಎನ್ನುತ್ತಾರೆ.
ಇವರ ರಿಕ್ಷಾ ಸಂಪೂರ್ಣ ಹೂವಿನಿಂದ ಅಲಂಕೃತವಾಗಿದ್ದು ಚಾಲನೆ ಮಾಡಲು ಬೇಕಾದಷ್ಟು ಮಾತ್ರ ಹೂವಿನ ಕುಂಡಗಳನ್ನು ಬದಿಗೆ ಸರಿಸಿ ಚಾಲನೆ ಮಾಡುತ್ತಾರೆ ಎನ್ನುತ್ತಾರೆ ಅಭಿಷೇಕ್.

