ಪುಂಜಾಲಕಟ್ಟೆ: ಇಲ್ಲಿನ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ಸಂಘದ ಸ್ಥಾಪಕಾಧ್ಯಕ್ಷ ದಿ. ಪದ್ಮ ಮೂಲ್ಯ ಅನಿಲಡೆ ಅವರ ಸ್ಮರಣಾರ್ಥ ದ.ಕ.,ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಫೆ.23 ರಿಂದ ಮಾ.2ರವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ.
ಫೆ.23ರಂದು ಸಂಜೆ ಗಂಟೆ 7 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅವರು ಉದ್ಘಾಟಿಸಲಿರುವರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿರುವರು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೇ ವೇಳೆ ಮುಖ್ಯ ಶಿಕ್ಷಕ ಮೋನಪ್ಪ ಮತ್ತು ಉದಯೋನ್ಮುಖ ಪ್ರತಿಭೆ ಅಭಿನವ್ ಎಚ್.ಕೆ. ಅವರನ್ನು ಸಮ್ಮಾನಿಸಲಾಗುವುದು.
ಮಾ.2ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಸಚಿವ ಯು.ಟಿ.ಖಾದರ್ ಅವರು ಅಧ್ಯಕ್ಷತೆ ವಹಿಸಲಿರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಬಹುಮಾನ ವಿತರಿಸುವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು
ಫೆ.23 ರಂದು ಮುದರಂಗಡಿ ಶ್ರೀ ಗುರು ಕಲಾ ತಂಡದ ನಾಟಕ ವಾಸುದೇವೇರ್ನ ಕುಟುಂಬ, ಫೆ. 24ರಂದು ಧರಿತ್ರಿ ಕಲಾವಿದರು ಕುಡ್ಲ-ಇಂಚಾಂಡ ಎಂಚ, ಫೆ.25ರಂದು ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ಬಜ್ಪೆ-ಬರೇದಾತ್ಂಡ್ ಒಚ್ಚೆರಾಪುಜಿ, ಫೆ. 26ರಂದು ಪ್ರಸನ್ನ ಕಲಾವಿದೆರ್ ಬಲೂರು ಉಡುಪಿ-ಮೇ 22, ಫೆ. 27ರಂದು ತುಳುವೆರೆ ಉಡಲ್ ಕಲಾವಿದೆರ್ ಜೋಡುಕಲ್ಲು-ಶ್ರೀಮತಿ, ಫೆ. 28ರಂದು ನಮ್ಮ ಕಲಾವಿದರು ನೆಲ್ಯಾಡಿ-ಮಗೆ ದುಬಡ್, ಮಾ. ೧ರಂದು ಅಭಿನಯ ಕಲಾವಿದೆರ್ ಉಡುಪಿ-ಬರಂದೆ ಕುಲ್ಲಯೆ ಸ್ಪರ್ಧಾ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರನ್ನು ಸಮ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

