ಬಂಟ್ವಾಳ: ಸಂಘ ಸಂಸ್ಥೆಗಳ ಸಾಮಾಜಿಕ ಚಟುವಟಿಕೆಗಳಂತಹ ಸಮಾಜದ ಅಭಿವೃದ್ದಿ ಕಾರ್ಯಗಳಿಂದ ಊರಿಗೆ ಉತ್ತಮ ಹೆಸರು ಬರುತ್ತದೆ. ನಾಟಕ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಭಿನಂದಾರ್ಹರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಶನಿವಾರ ರಾತ್ರಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ಸಂಘದ ಸ್ಥಾಪಕಾಧ್ಯಕ್ಷ ದಿ. ಪದ್ಮ ಮೂಲ್ಯ ಅನಿಲಡೆ ಅವರ ಸ್ಮರಣಾರ್ಥ ದ.ಕ.,ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಗಳೂರು ಚರ್ಚ್ ಧರ್ಮಗುರು ರೆ. ಫಾ. ವಿಲಿಯಂ ಮಿರಾಂದ ಅವರು ಮಾತನಾಡಿ ರಂಗಭೂಮಿಯು ಶಕ್ತಿಶಾಲಿ ಮಾಧ್ಯಮವಾಗಿದೆ. ಬದುಕಿಗೆ ಕಲಾಪ್ರೇರಣೆ ಅಗತ್ಯವಾಗಿದ್ದು ಇದರಿಂದ ವ್ಯಕ್ತಿತ್ವದ ನಿರ್ಮಾಣದ ಜೊತೆಗೆ ತನ್ನ ಮತ್ತು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ, ಕಕ್ಯಪದವು ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉದ್ಯಮಿ, ಸಿನಿಮಾ ನಿರ್ಮಾಪಕ ಹರೀಂದ್ರ ಪೈ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ದ.ಕ. ಜಿಲ್ಲಾ ಕಾರ್ಯನಿರತ ಪರ್ತಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ನಿವೃತ್ತ ಬ್ಯಾಂಕ್ ಅಧಿಕಾರಿ ವಿಟ್ಠಲ ಶೆಟ್ಟಿ ಮೈಸೂರ್, ಕಾಮಿಡಿ ಕಿಲಾಡಿ ನಟ ಅನೀಶ್ ಅಮೀನ್, ಉದ್ಯಮಿ ಓಂ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಘದ ಗೌರವಾಧ್ಯಕ್ಷ ಮೋಹನ ಸಾಲ್ಯಾನ್, ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುಂಜಾಲಕಟ್ಟೆ ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಮೋನಪ್ಪ, ಉದಯೋನ್ಮುಖ ಪ್ರತಿಭೆ ಅಭಿನವ್ ಎಚ್.ಕೆ., ನಟ ಅನೀಶ್ ಅಮೀನ್ ಹಾಗೂ ದಿ. ಪದ್ಮ ಮೂಲ್ಯ ಅವರ ಮನೆಯವರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಕಾರ್ಯಕಾರಿ ಸಮಿತಿ ಸದಸ್ಯ ರಾಜೇಂದ್ರ ಕೆ.ವಿ.ಅವರು ಪ್ರಸ್ತಾವಿಸಿದರು. ವನಿತಾ ಸಮಾಜದ ಗೌರವಾಧ್ಯಕ್ಷೆ ಅಮೃತಾ ಎಸ್.ವಂದಿಸಿದರು.ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ಗುರು ಕಲಾತಂಡ ಮುದರಂಗಡಿ ಇವರಿಂದ ವಾಸುದೇವೆರ್‍ನ ಜೋಕುಲು ನಾಟಕ ಪ್ರದರ್ಶನಗೊಂಡಿತು.ಫೆ.೨೫ರಂದು ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ತಂಡದವರಿಂದ ಬರೆದಾತ್ಂಡ್ ಒಚ್ಚೆರಾಪುಜಿ ಸರ್ಧಾ ನಾಟಕ ನಡೆಯಲಿದೆ.