ಬಂಟ್ವಾಳ: ಮನೆ ನಿರ್ಮಾಣ ಮಾಡುವುದಾಗಿ ಗ್ರಾಮಪಂಚಾಯತ್ ನಿಂದ ಪರವಾನಿಗೆ ಪಡೆದ ಬಳಿಕ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲು ಮುಂದಾಗಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶ್ವಹಿಂದೂಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ದ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.





ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ಜಮೀನು ಕ್ರಯಕ್ಕೆ ಪಡೆದು ಬಳಿಕ ಮನೆ ನಿರ್ಮಾಣ ಕ್ಕಾಗಿ ಗ್ರಾ.ಪಂ.ನಿಂದ ಪರವಾನಗಿ ಪಡೆದುಕೊಂಡಿದ್ದರು.
ಆದರೆ ಮನೆ ನಿರ್ಮಾಣ ವಾಗಬೇಕಿದ್ದ ಜಾಗದಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸ್ಥಳೀಯರ ದೂರು ಬಂದ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡದ ಪ್ರಮುಖರು ಸ್ಥಳಕ್ಕೆ ಬೇಟಿ ನೀಡಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ದಾಗ ಇದು ಮನೆಯಂತಿರದೆ, ಪ್ರಾರ್ಥನಾ ಮಂದಿರದ ರೂಪದಲ್ಲಿ ಇರುವುದರಿಂದ ಇದರ ಪರವಾನಿಗೆಯನ್ನು ರದ್ದು ಮಾಡುವಂತೆ ಸ್ಥಳೀಯ ಗ್ರಾ.ಪಂ.ಪಿಡಿಒ ಹಾಗೂ ಸ್ಥಳೀಯ ಜನಪ್ರಗತಿ ನಿಧಿಗಳನ್ನು ಸ್ಥಳಕ್ಕೆ ಕರೆಸಿ ಒತ್ತಡ ಹೇರಿದ್ದಾರೆ ಎಂದು ಸಂಘಟನೆಯ ಪ್ರಮುಖ ಲೋಹಿತ್ ಪಣೋಲಿಬೈಲು, ಹಾಗೂ ಸಚಿನ್ ಮೆಲ್ಕಾರ್ ತಿಳಿಸಿದ್ದಾರೆ.

