Monday, January 26, 2026

‘ನಾರಿ ‘ ಕಿರು ಚಿತ್ರ

ಇಂದಿನ ಸ್ತ್ರೀ ತನ್ನ ಮೇಲಾಗುತ್ತಿರುವ ಅನ್ಯಾಯ, ಅನಾಚಾರ, ಅತ್ಯಾಚಾರ ಮತ್ತು ಭ್ರೂಣ ಹತ್ಯೆಯನ್ನು ತಡೆಯುವಲ್ಲಿ ವಿಫಲಳಾಗುತ್ತಿದ್ದಾಳೆ. ದೇಶದೆಲ್ಲೆಡೆ ನಡೆಯುತ್ತಿರುವ ಸ್ತ್ರೀ ದೌರ್ಜನ್ಯವನ್ನು ತಡೆಯುವ ದಾರಿ ಕಾಣದೆ ಅಸಹಾಯಕಳಾಗಿದ್ದಾಳೆ. ತಾನಿರುವ ವಲಯಗಳಲ್ಲಿ ನಡೆಯುವ ಶೋಷಣೆಗೆ ಸಿಲುಕಿ ಜರ್ಝರಿತಳಾಗಿದ್ದಾಳೆ. ಪ್ರೀತಿ, ಸ್ನೇಹ, ಆತ್ಮವಿಶ್ವಾಸದ ಬದುಕು ಈಗೀಗ ದುಸ್ತರವಾಗುತ್ತಿದೆ. ಕಾನೂನು ಸ್ತ್ರೀಯರ ಪರವಾಗಿದ್ದರೂ, ತನಗಿರುವ ಮಿತಿಗಳಿಂದ ಹೊರಬಾರಲಾರದೆ ಮನದೊಳಗೆ ಕುಗ್ಗುತ್ತಿದ್ದಾಳೆ.ಹೆಣ್ಣೊಬ್ಬಳು ತನ್ನ ಶಕ್ತಿ ಸಾಮರ್ಥ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು. ಯಾವುದೇ ವಿಧದ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ವಿರುದ್ಧ ದನಿ ಎತ್ತುವುದು ಮತ್ತು ನ್ಯಾಯ ಪಡೆಯುವುದು ಪ್ರತಿಯೊಬ್ಬ ಹೆಣ್ಣು ಮಗಳ ಹಕ್ಕು ಎಂಬುದನ್ನು ಒಂದು ಕಿರು ಚಿತ್ರದ ಮೂಲಕ ತೋರಿಸಿಕೊಡಲು ಹೊರಟಿದ್ದಾರೆ, ಬಾತುಕುಲಾಲ್ ಮತ್ತು ಭವ್ಯ ಕುಂಪಲ ಅವರು.

ಈ ಕಥೆ, ನಿರ್ದೇಶನ, ಕ್ಯಾಮರಾ, ಎಡಿಟಿಂಗ್ ಎಲ್ಲವೂ ಬಾತುಕುಲಾಲ್ ವರ್ಕಾಡಿ ಅವರ ಕೈಚಲಕದಲ್ಲಿ ಮೂಡಿಬಂದಿದೆ.
ಭವ್ಯ ಕುಂಪಲ ಅವರ ನಟನೆ ಈ ಚಿತ್ರಕ್ಕೆ ಮೆರುಗು ನೀಡಿದೆ.

ಹೆಣ್ಣು ಅಬಲೆಯಲ್ಲ ಸಬಲೆ, ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬಂತೆ ಕಂಡು ಬರುವ ರೀತಿಯ ಒಂದು ಕಿರು ಚಿತ್ರ ಬಾತು ಅವರ ಕೈಯಲ್ಲಿ ಅತ್ಯದ್ಭುತ ವಾಗಿ ಮೂಡಿಬಂದಿದೆ.
ಇಂದಿನ ಕಾಲದಲ್ಲಿ ನಾರಿಯವರ ಮೇಲೆ ನಿರಂತರವಾಗಿ ಅತ್ಯಾಚಾರ, ಅನ್ಯಾಯಗಳು ನಡೆಯುತ್ತಿದ್ದು , ಮಹಿಳೆ ಸ್ವರಕ್ಷಣೆಗಾಗಿ ಕರಾಟೆಯಂತಹ ವಿದ್ಯೆ ಯನ್ನು ಕಲಿತುಕೊಂಡು ಸಮಾಜದಲ್ಲಿ ದಿಟ್ಟತನದಿಂದ ಬದುಕಬೇಕು ಎಂಬುದೇ ‘ನಾರಿ ‘ಚಿತ್ರದ ಸಾರಾಂಶ.
ಮೂವರು ಹುಡುಗರು ಧೂಮಪಾನ ಮಾಡುತ್ತಾ ನಿಂತಿರುವಾಗ ಹೆಣ್ಣುಮಗಳು ಒಂಟಿಯಾಗಿ ಹೋಗುವುದನ್ನು ಕಂಡು ಅವಳ ಬೆನ್ನ ಹಿಂದೆ ಬೀಳುತ್ತಾರೆ. ವಿಚಿತ್ರವಾಗಿ ನಡವಳಿಕೆಯಿಂದ ಅವಳ ಹಿಂದೆ ಸಾಗುತ್ತಿರುವಾಗ ಅವಳಿಗೆ ಇವರ ಕೆಟ್ಟ ಬುದ್ದಿಯ ಬಗ್ಗೆ ಅರಿವಾಗುತ್ತಿದೆ.
ಕೂಡಲೇ ಎಚ್ಚೆತ್ತುಕೊಂಡ ಅವಳು, ಕರಾಟೆ ಪರಿಣಿತ ಳಾಗಿದ್ದರಿಂದ ಈ ಪೋಲಿ ಹುಡುಗರ ಮೇಲೆ ತಿರುಗಿ ಬೀಳುತ್ತಾಳೆ.
ಹೆಣ್ಣು ಮಗಳ ಧೈರ್ಯ ಮತ್ತು ಸಾಹಸ ಪ್ರದರ್ಶನ ನೋಡಿ ಪಡ್ಡೆ ಹುಡುಗರು ಒಂದೇ ಸಮನೆ ಓಟಕ್ಕಿತ್ತರು.
ಇದರಿಂದ ಒಂದು ಹೆಣ್ಣು ಮಗಳು ಹೇಗೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಅತೀ ಸೂಕ್ಷವಾಗಿ, ಉತ್ತಮವಾಗಿ ಸಮಾಜಕ್ಕೆ ನೀಡಿದ್ದಾರೆ.ಅವರ ಕೈಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅನೇಕ ಇಂತಹ ಕಿರುಚಿತ್ರ ಗಳು ಮೂಡಿಬಂದಿದೆ.
ಅಂತಹ ಅನೇಕ ಕಿರುಚಿತ್ರಗಳಲ್ಲಿ ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುವ ಅತ್ಯಮೂಲ್ಯ ಚಿತ್ರ ಎಲ್ಲರ ಮನಗೆದ್ದಿದೆ.
ಈ ಕಿರುಚಿತ್ರ ಬಿ.ಕೆ.ಕ್ರಿಯೇಷನ್ ಯೂ.ಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಲು ಅವಕಾಶ ಇದೆ.
[7:21 PM, 10/11/2019] Right Moment@ Right Time: p

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...