Monday, January 26, 2026

ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥಸ್ನಾನ

ಬಂಟ್ವಾಳ : ಪುರಾಣ ಪ್ರಸಿದ್ಧ ಸಮುದ್ರ ಮಟ್ಟದಿಂದ ಒಂದು ಸಾವಿರ ಅಡಿಗೂ ಎತ್ತರದ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು-ಗೋಳ್ತಮಜಲು-ಅಮ್ಟೂರು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶದ ನಡುವೆ ಕಾಣುವ ಈ ಕಗ್ಗಲ್ಲ ಪರ್ವತಕ್ಕೆ ನಿರ್ಮಿಸಿದ 350 ಮೆಟ್ಟಲುಗಳನ್ನು ಏರಿದಾಗ ಪ್ರಕೃತಿ ಸೌಂದರ್ಯದ ಮಧ್ಯೆ ಸಾಕ್ಷಾತ್ಕಾರವಗುವುದು ಸದಾಶಿವ ಸಾನಿಧ್ಯ.

ನರಹರಿ ದೇವಾಲಯದ ಹಿನ್ನಲೆ : ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ  ಆಗುತ್ತೆ ಎಂಬ ಪ್ರತೀತಿ. ಕುರುಕ್ಷೇತ್ರ ಯುದ್ಧ ಅದ ಮೇಲೆ ಪಾಂಡವರು ಎಲ್ಲಾ ತೀರ್ಥ ಕ್ಷೇತ್ರ ಗಳ ಸಂದರ್ಶಿಸಿ ಬರುವಾಗ ಒಂದು ಇಲ್ಲಿ ತಂದಿದ್ದಾರೆ ಎಂಬ ನಂಬಿಕೆ ಇದೆ. ಇಲ್ಲಿ ಮರುದಿವಸ ಪೂಜೆ ಮಾಡಲು ಶಿವಲಿಂಗ ವನ್ನು ಪ್ರತಿಸ್ಥಾಪನೆ ಮಾಡಿದ್ದಾರೆ.
ಕೃಷ್ಣ ದೇವರು
ಶಿವಲಿಂಗ ವನ್ನು ಅಭಿಷೇಕ ಮಾಡಲು ಈಕ್ಷೇತ್ರದಲ್ಲಿ ಶಂಖ ಚಕ್ರ ಗದಾ ಪದ್ಮ ಎಂಬ ನಾಲ್ಕು ಕೂಪಗಳನ್ನು ಮಾಡಿದ್ದಾರೆ ಎಂದ ಪ್ರತೀತಿ ಇದೆ.
ಅದರಂತೆ ಈಗ ಕೂಡ ಈ ನಾಲ್ಕು ಕೆರಗಳಲ್ಲಿ ಬೇಸಿಗೆ ಕಾಲದಲ್ಲಿ ಯೂ ಕಡಿಮೆ ಯಾಗದೆ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಇರುತ್ತದೆ.

ತೀರ್ಥ ಸ್ನಾನದಲ್ಲಿ ಭಾಗಿಯಾದರು ಭಕ್ತಾಧಿಗಳು:

ನರಹರಿ ಪರ್ವತದಲ್ಲಿ ಆಟಿ ಅಮಾವಸ್ಯೆಯ ಅಂಗವಾಗಿ ವಿಶೇಷ ತೀರ್ಥಸ್ನಾನ ಹಾಗೂ ನಾಗದೇವರಿಗೆ ವಿಶೇಷ ’ಆಶ್ಲೇಷ ಪೂಜೆಯು ಜರುಗಿತು.
ಸರ್ವರೋಗ ನಿರ್ವಾಕ ಎಂಬ ಅನನ್ಯ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ’ಸಪ್ತವರ್ಣಿ’ ಪಾಲಸ ಮರದ ರಸವನ್ನು ಸೂರ್ಯೋಧಯದ ಮೊದಲು ಸೇವಿಸುವ ದಿನವಾದ ಆಟಿ (ಅಷಾಡ) ಅಮಾವಾಸ್ಯೆಯಂದು ಪೌರಾಣಿಕ ಹಿನ್ನಲೆಯ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನಗೈದರೆ ಸರ್ವಪಾಪ ನಿವಾರಣೆಗೊಂಡು ಇಷ್ಟಾರ್ಥ ಸಿದ್ದಿಸುವುದು ಎಂಬುದು ನಂಬಿಕೆ. ಆದ್ದರಿಂದ ಪರ್ವತದ ತುತ್ತ ತುದಿಯಲ್ಲಿ ಬಂಡೆಕಲ್ಲಿನ ಮೇಲೆ ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಶಂಖ, ಚಕ್ರ, ಗದಾ, ಪದ್ಮ ಆಕಾರದ ತೀರ್ಥ ರೂಪಗಳಲ್ಲಿ ಅಂದು ಮುಂಜನೆಯೆ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವ ವಧೂವರರು ಮಿಂದು ನಾಗದೇವರಿಗೆ ವಿನಾಯಕ ದೇವರಿಗೆ ಸದಾಶಿವ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...