ಬಂಟ್ವಾಳ: ಬಂಟ್ವಾಳ ತಾಲೂಕು ಪಾಣೆಮಗಳೂರು ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಪಾಣೆಮಂಗಳೂರು ಇಲ್ಲಿನ ವ್ಯವಸ್ಥಾಪನ ಸಮಿತಿಗೆ ದೇವಸ್ಥಾನದ ಮ್ಯಾನೇಜರ್ ಆನಂದ್ ಕೆ ರವರಿಗೆ ವಿಶೇಷ ಮನವಿ ನೀಡಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ದೇವಸ್ಥಾನ ಪ್ರವೇಶ ಮಾಡಬೇಕೆಂದು ಮಾನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣಪ್ಪ ಕಲ್ಲಡ್ಕ ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕರಾದ ಮಿಥುನ್ ಪೂಜಾರಿ ಕಲ್ಲಡ್ಕ ಹಾಗೂ ಬಜರಂಗದಳ ಕಲ್ಲಡ್ಕ ವಲಯ ಮತ್ತು ಬಜರಂಗದಳ ನರಹರಿ ಬೋಳಂಗಡಿ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

