Tuesday, July 15, 2025

ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಾಣೆ

ಬಂಟ್ವಾಳ: ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಯೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಅಬ್ದುಲ್ ಬಶೀರ್ ರವರ ಮಗ

ಹಿದಾಯತುಲ್ಲಾ (30 ) ಕಾಣೆಯಾದ ವ್ಯಕ್ತಿ.

ಹಿದಾಯತುಲ್ಲಾ ಅವರು ಪುತ್ತೂರಿನ ರಾಜಧಾನಿ ಚಿನ್ನದ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದು ಸೆ. 13 ರಂದು ಸಜಿಪ ಮುನ್ನೂರು ಗ್ರಾಮದ ನಂದಾವರದ ತನ್ನ ಮನೆಯಿಂದ ಕೆಲಸಕ್ಕೆಂದು ಹೊರಟು ಹೋದವನು ವಾಪಾಸು ಮನೆಗೆ ಬಾರದೇಯಿದ್ದು, ಸೆ. 13ರಂದು ರಾತ್ರಿ 8.00 ಗಂಟೆಯ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾನೆ .

ಈ ಬಗ್ಗೆ ಪುತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್ ಗೆ ಹೋಗಿ ವಿಚಾರಿಸಿ ದ ಸಂದರ್ಭ ದಲ್ಲಿ ಸುಮಾರು ಜನರು ಬಂದು ಹಿದಾಯತುಲ್ಲನು ಹಲವರಿಂದ ಹಣ ಪಡೆದು ವಾಪಾಸು ನೀಡದಿರುವ ವಿಚಾರ ತಿಳಿದು ಬಂದಿದೆ, ಹಾಗೂ ಯಾರೊಂದಿಗೆ ಎಷ್ಟು ಎಷ್ಟು ಹಣದ ವ್ಯವಹಾರ ಮಾಡಿದ್ದಾನೆ ಎಂಬ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಅವರು ತಿಳಿಸಿರುವ ಬಗ್ಗೆ ಅವರ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಮಗನನ್ನು ಪತ್ತೆ ಮಾಡಿಕೊಡುವಂತೆ ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

More from the blog

ತುಳುರಂಗಭೂಮಿ‌ ಕಲಾವಿದ ಮೌನೇಶ ಆಚಾರ್ಯ ನಿಧನ..

ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ‌ ಕಲಾವಿದ, ಕಾಪಿಕಾಡು‌ ನಿವಾಸಿ ಮೌನೇಶ ಆಚಾರ್ಯ ಮಾಣಿ(44) ಇವರು ಮಂಗಳವಾರ ಮುಂಜಾನೆ ತಮ್ಮ‌ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಚಿನ್ನದ ಕೆಲಸ‌ಮಾಡುತ್ತಿದ್ದ ಇವರು ಜೊತೆಗೆ ಮನೆಸಮೀಪವೇ ಚಿಕ್ಕ‌ ದಿನಸಿ‌ ಅಂಗಡಿ...

ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಹಾಗೂ ವಾರ್ಷಿಕ ಸಭೆ..

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಹಾಗೂ ವಾರ್ಷಿಕ ಸಭೆ ಸೋಮವಾರ...

ನಿರಂತರ ಮಳೆ : ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ದಿನಾಂಕ 15.07.2025ರಂದು ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್...

ಒಡಿಯೂರು ಶ್ರೀ ಜನ್ಮದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ವಿಟ್ಲ : ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬದುಕಿನ ಉತ್ತುಂಗಕ್ಕೆ ಕಾರಣವಾಗುತ್ತದೆ. ಬದುಕು ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಋತುವಿಗನುಗುಣವಾಗಿ ಹಿತ, ಮಿತ ಆಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪಡೆಯಬಹುದು...