ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯ ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಕಾಲವಾಧಿ ನೇಮೋತ್ಸವ ಎ.1 ರಿಂದ ಆರಂಭಗೊಂಡು ಎ. 3ರವರೆಗೆ ನಡೆಯಲಿದೆ.

ಇದರ ಪೂರ್ವಭಾವಿಯಾಗಿ ಮಾ. 24ರಂದು ಭಾನುವಾರ ಬೆಳಿಗ್ಗೆ ಗಂಟೆ 9ಕ್ಕೆ ಕೋಳಿಗುಂಟ ನಡೆಯಲಿರುವುದು. ಹಾಗೂ ಮಾ. 31ರಂದು ಭಾನುವಾರ ಬೆಳಿಗ್ಗೆ ಗಂಟೆ 8.30ಕ್ಕೆ ನೂತನ ಧ್ವಜಸ್ತಂಭಕ್ಕೆ ಕಲಶಾಭಿಷೇಕ ನಡೆಯಲಿದೆ.
ಎ. 1ರಂದು ಸೋಮವಾರ ಬೆಳಿಗ್ಗೆ ಗಂಟೆ 10ಕ್ಕೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ಗಂಟೆ 10ಕ್ಕೆ ಶ್ರೀ ಅರಸು ದೈವದ ನೇಮೋತ್ಸವ, ಎ.2ರಂದು ಮಂಗಳವಾರ ರಾತ್ರಿ ಗಂಟೆ 9ಕ್ಕೆ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ, ಎ. 3ರಂದು ಬುಧವಾರ ರಾತ್ರಿ ಗಂಟೆ 10ಕ್ಕೆ ಶ್ರೀ ವೈದ್ಯನಾಥ ದೈವದ ನೇಮೋತ್ಸವ ಹಾಗೂ ಕಂಚಿಲ ಸೇವೆ ನಡೆಯಲಿದೆ ಎಂದು ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.