Sunday, July 6, 2025

ಉಪ್ಪಿನಂಗಡಿ ಎಸ್.ಐ.ನಂದಕುಮಾರ್ ನೇತ್ರತ್ವದಲ್ಲಿ ಅಂತರಾಜ್ಯ ಕಳ್ಳರ ಬಂಧನ

ಉಪ್ಪಿನಂಗಡಿ ಆರ್.ಕೆ ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರಾಜ್ಯ ಕಳ್ಳರ ಬಂಧನ.


ಗುಜರಾತ್ ಮೂಲದ ಸಾಂಸಿವಾಡಿ ರಲಿಯಾಟಿ ನಿವಾಸಿ
ರಮೇಶ್ ಭಾಯ್ ಸಿಸೋಡಿಯಾ ಅವರ ಮಗ
ಭಗವಾನ್ ಸಿಂಗ್ ಯಾನೆ ಭಗವಾನ್ ಸಿಂಗ್ ರಮೇಶ್ ಭಾಯ್ ಸಿಸೋಡಿಯಾ ಪ್ರಾಯ 32 ವರ್ಷ .
ಗುಜರಾತ್ ನ
ಪನ್ನಲಾಲ್‌ ಬಾನ್ ಅವರ ಮಗ
ಸುನೀಲ್ ಯಾನೆ ಸಂದೀಪ್ ಪ್ರಾಯ 27 ವರ್ಷ .
ಗುರುದ್ವಾರ ಮಂದಿರದ ಹಿಂಭಾಗ, ಗುಂಡಾಲಿಯಾ ಬೈಪಾಸ್‌‌ ರಸ್ತೆ, ಬೂಂದಿ ಜಿಲ್ಲೆ ರಾಜಸ್ಥಾನ ದ ನಿವಾಸಿ
ಮೊಹಮ್ಮದ್ ಡೊಂಗ್ರಿ ಅವರ ಮಗ
ಜಮೀಲ್ ಯಾನೆ ಚಾಚಾ ಪ್ರಾಯ 60 ವರ್ಷ ಬಂಧಿತ ಆರೋಪಿಗಳು.

ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಪೇಟೆಯಲ್ಲಿರುವ ಆರ್‌.ಕೆ ಜ್ಯುವೆಲ್ಲರ್ ಎಂಬ ಚಿನ್ನದ ಅಂಗಡಿಗೆ ಅಗಸ್ಟ್ 16 ರಂದು ರಾತ್ರಿ ಕಳ್ಳರು, ಅಂಗಡಿಯ ಮುಂಭಾಗದ ಕಬ್ಬಿಣದ ಶಟರ್‌ ನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸಿ, ಅಂಗಡಿಗೆ ಒಳಪ್ರವೇಶಿಸಿ, ಅಂಗಡಿಯಲ್ಲಿದ್ದ 27,00,000 ರೂ ಮೌಲ್ಯದ
650.69 ಗ್ರಾಂ ಚಿನ್ನದ ವಿವಿಧ ಬಗೆಯ ಆಭರಣ ಹಾಗೂ 7 ಕೆ.ಜಿ ತೂಕದ ವಿವಿಧ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಘಟನೆ ಸಂಭವಿಸಿತ್ತು.
ಈ ಘಟನೆಗೆ ಸಂಬಂದಿಸಿದಂತೆ, ಆರ್.ಕೆ ಜ್ಯುವೆಲ್ಲರಿ ಮಾಲಕ ಸಿರಾಜ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿ ಹಾಗೂ ಕಳವಾದ ಚಿನ್ನಾಭರಣಗಳ ಪತ್ತೆಗೆ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಆದೇಶದಂತೆ ಮೂರು ತಂಡಗಳನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ಪತ್ತೆಗೆ ಶ್ರಮಿಸಲಾಗಿದ್ದು, ಅದರಂತೆ ಕಳ್ಳತನಕ್ಕೆ ಬಳಸಿದ ವಾಹನದ ಬಗ್ಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಅಧಿಕಾರಿ ಹಾಗೂ ಸಿಬ್ಬಂಧಿಗಳ ತಂಡವು ಮುಂಬಯಿ, ಗುಜರಾತ್‌, ಮದ್ಯ ಪ್ರದೇಶ, ರಾಜಸ್ಥಾನಕ್ಕೆ ತೆರಳಿ ಆರೋಪಿ ಹಾಗೂ ವಾಹನ ಪತ್ತೆಗೆ ಪ್ರಯತ್ನಿಸಿದ್ದರು.
ಅಪರಾಧ ಪತ್ತೆ ತಂಡಕ್ಕೆ ದೊರೆತ ಮಾಹಿತಿಯಲ್ಲಿನ ವಾಹನವಾದ ಈಚರ್‌ ಲಾರಿ ಯನ್ನು ಗುಜರಾತ್ ರಾಜ್ಯದ ದಾಹೋಡ್ ನ ಕತ್ವಾರ ಎಂಬಲ್ಲಿ ಪತ್ತೆ ಮಾಡಿ, ನಂತರ ಮೂವರು ಆರೋಪಿಗಳನ್ನು ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳೆಲ್ಲರೂ ತಾವು ಕಳವು ಮಾಡಿದ ಸೊತ್ತುಗಳನ್ನು ಪರಸ್ಪರ ಹಂಚಿಕೊಂಡಿದ್ದು, ವಶಕ್ಕೆ ಪಡೆದ ಮೂವರು ಆರೋಪಿಗಳಲ್ಲಿದ್ದ ಒಟ್ಟು 185.590 ಗ್ರಾಂ ತೂಕದ ಚಿನ್ನಾಭರಣ, ಇದರ ಒಟ್ಟು ಮೌಲ್ಯ ರೂ 7,05,242.00 ಬೆಳ್ಳಿಯ ಒಟ್ಟು ತೂಕ 3972.060 ಗ್ರಾಂ , ಇದರ ಒಟ್ಟು ಮೌಲ್ಯ ರೂ 2,26,407.00 ಹಾಗೂ ಕೃತ್ಯಕ್ಕೆ ಬಳಸಿದ ಈಚರ್ ಲಾರಿ ಯನ್ನು (ಈಚರ್ ರಾರಿಯ ಅಂದಾಜು ಮೌಲ್ಯ ರೂ. 23,00,000.00 ) ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಈಚರ್ ಲಾರಿ ಹಾಗೂ ಚಿನ್ನಾಭರಣಗಳ ಒಟ್ಟು ಮೌಲ್ಯ 32,31,649.00 ರೂ ಆಗಬಹುದು.

ಈಚಲ್ ಲಾರಿಯ ಚಾಲಕನಾದ ಭಗವಾನ್ ಸಿಂಗ್ ಯಾನರ ಭಗವಾನ್ ಸಿಂಗ್ ರಮೇಶ್ ಭಾಯ್ ಸಿಸೋಡಿಯಾ ಎಂಬಾತನು ತನ್ನ ಬಾಬ್ತು ಈಚರ್ ಲಾರಿ ನೇದರಲ್ಲಿ ಸುನೀಲ್ ಯಾನೆವಸಂದೀಪ್ , ಜಮೀಲ್ ಯಾನೆ ಹಾಗೂ ಜೊತೆಯಲ್ಲಿ ಬಂದಿದ್ದ ರಾಜಸ್ಥಾನ ರಾಜ್ಯ ಹಾಗೂ ಗುಜರಾತ್‌ ನ 05 ಜನ ಹೀಗೆ ಒಟ್ಟು 08 ಜನ ಸೇರಿಕೊಂಡು, ಈಚರ್‌ ಲಾರಿಯಲ್ಲಿ ಬೆಂಗಳೂರಿಗೆ ಬಾಡಿಗೆ ಬಂದು, ಅಲ್ಲಿಂದ ಹೊರಟ ನಂತರ ಒಂದು ಚಿನ್ನಾಭರಣದ ಅಂಗಡಿಯನ್ನು ಕಳವು ಮಾಡುವ ಬಗ್ಗೆ ತೀರ್ಮಾನಿಸಿ, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಮೀಪ ಉಪ್ಪಿನಂಗಡಿಯ ಆರ್.ಕೆ ಜುವೆಲ್ಲರಿ ಅಂಗಡಿಯಿಂದ ದಿನಾಂಕ ಅಗಸ್ಟ್ 15ರ ರಾತ್ರಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದು, ಅಲ್ಲದೇ ಕಳವು ಮಾಡಿದ್ದ ಆರೋಪಿಗಳೆಲ್ಲರೂ ಚಿನ್ನಾಭರಣಗಳನ್ನು ಪಾಲು ಮಾಡಲಾಗಿರುತ್ತದೆ. ತಲೆಮರೆಸಿಕೊಂಡಿರುವ ರಾಜಸ್ಥಾನ ಹಾಗೂ ಗುಜರಾತ್‌ ನ ಐವರು ಆರೋಪಿಗಳ ಬಂಧನ ಬಾಕಿ ಇದೆ.

ಕಳ್ಳತನ ಮಾಡಿದ ತಂಡವು ರಾಜಸ್ಥಾನ ಹಾಗೂ ಗುಜರಾತ್‌ ರಾಜ್ಯದ ಕುಖ್ಯಾತ ಕಳ್ಳರನ್ನು ಒಳಗೊಂಡ ತಂಡವಾಗಿದ್ದು, ಕಳ್ಳತನ ತಂಡವು ಗುಜರಾತ್ ಹಾಗೂ ರಾಜಸ್ಥಾನವನ್ನು ಹೊರತುಪಡಿಸಿದ ಹೊರ ರಾಜ್ಯಕ್ಕೆ ವಿವಿಧ ಕೆಲಸಕ್ಕೆ ಭೇಟಿ ಮಾಡಿ, ಹಿಂತಿರುಗುವ ಸಮಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾವಲುಗಾರರು, ಸಿಸಿ ಕ್ಯಾಮಾರ ಇಲ್ಲದ ಚಿನ್ನದ ಅಂಗಡಿಗಳನ್ನು ಹಗಲು ಸಮಯ ನೋಡಿ, ಬಳಿಕ ಕಳ್ಳತನಕ್ಕೆ ಹೊಂಚು ಹಾಕಿ ರಾತ್ರಿ ಸಮಯ ಕಳ್ಳತನ ಮಾಡಿ, ಹಿಂತಿರುಗುವ ತಂಡವಾಗಿದ್ದು, ಕಳ್ಳರ ವಾಸ ಸ್ಥಳವಾದ ಗುಜರಾತ್ ನ ರಲಿಯಾಟಿ, ಹಾಗೂ ರಾಜಸ್ಥಾನದ ದಿವೋಲಿ ವಠಾರದಲ್ಲಿ ಕುಖ್ಯಾತ ಕಳ್ಳರೇ ವಾಸ ಮಾಡಿಕೊಂಡಿರುವ ಗ್ರಾಮವಾಗಿರುತ್ತದೆ. ಸದ್ರಿ ಗ್ರಾಮಕ್ಕೆ ತೆರಳಿ, ಖಚಿತ ಮಾಹಿತಿ ಮೇರೆಗೆ ಪ್ರಕರಣ ಭೇಧಿಸಿದ ತಂಡಕ್ಕೆ ಇಲಾಖಾ ಮೇಲಾಧಿಕಾರಿಗಳು ಪ್ರಶಂಶಿಸಿರುತ್ತಾರೆ.

ಪ್ರಕರಣದ ಪತ್ತೆಯ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಲಕ್ಷ್ಮೀ ಪ್ರಸಾದ್ ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಡಾ| ವಿಕ್ರಮ್ ಅಮಟೆ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ದಿನಕರ ಶೆಟ್ಟಿ ರವರ ನಿರ್ದೇಶನದಲ್ಲಿ ಅಪರಾಧ ಪತ್ತೆ ತಂಡದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಹಾಗೂ ಉಪ್ಪಿನಂಗಡಿ ಠಾಣಾ ಪಿಎಸ್‌ಐ ನಂದಕುಮಾರ್‌ ಎಂಎಂ, ಸಿಬ್ಬಂಧಿಗಳಾದ ಪುತ್ತೂರು ನಗರ ಠಾಣಾ ಎಎಸ್‌ಐ ಚಿದಾನಂದ ರೈ, ಡಿಸಿಐಬಿ ಘಟಕದ ಪ್ರವೀಣ್‌ ದೇವಾಡಿಗ, ಪ್ರವೀಣ್‌ ರೈ, ಉಪ್ಪಿನಂಗಡಿ ಠಾಣೆಯ ಹರೀಶ್ಚಂದ್ರ, ಇರ್ಷಾದ್‌, ಪುತ್ತೂರು ಸಂಚಾರ ಠಾಣೆಯ ಸ್ಕರಿಯ, ಬೆಳ್ತಂಗಡಿ ಸಂಚಾರ ಠಾಣೆಯ ಮನೋಹರ, ಪುತ್ತೂರು ಗ್ರಾಮಾಂತರ ಠಾಣೆಯ ಆದ್ರಾಂ, ವಿನಯ್‌, ಬಂಟ್ವಾಳ ಸಂಚಾರ ಠಾಣೆಯ ಪ್ರಶಾಂತ್ ರೈ, ವಿಟ್ಲ ಠಾಣೆ ಪ್ರಸನ್ನ, ಪುತ್ತೂರು ಗ್ರಾಮಾಂತರ ವೃತ್ತ ಕಛೇರಿ ಜಗದೀಶ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ರವರು ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ.

More from the blog

ಬೆಂಜನಪದವು ಪ್ರೌಢಶಾಲೆ : ಶಾಲಾ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ..

ಬಂಟ್ವಾಳ: ಇಂದು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ ನಡೆಯಿತು. ಶಾಲಾ ಸಂಸತ್ತಿನ ಮುಖ್ಯ ಮಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಮಂತ್ರಿಗಳಿಗೆ ರಾಜ್ಯಪಾಲರು ಪ್ರಮಾಣ...

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

Puttur : ಯುವತಿಗೆ ವಂಚಿಸಿದ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಯುವತಿಯೊಂದಿಗೆ ಮದುವೆಯಾಗುವುದಾಗಿ ದೈಹಿಕ ಸಂಪರ್ಕ  ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ...