Monday, July 14, 2025

ಹಾನಗಲ್, ಸಿಂಧಗಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ನಳಿನ್ ಕುಮಾರ್ ಕಟೀಲ್

ಬಂಟ್ವಾಳ:  ಮುಂಬರುವ ರಾಜ್ಯದ ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ  ಎಂದು ಮಂಗಳೂರು ಸಂಸದರು,  ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು  ಭವಿಷ್ಯ ನುಡಿದಿದ್ದಾರೆ.   ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆಯ ಅಂಗವಾಗಿ  ಮಂಗಳೂರು ವಿಧಾನ ಸಭಾ ಕ್ಷೇತ್ರದ  ಪುದು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಮೇರಮಜಲು ಗ್ರಾಮದ ಪಕ್ಕಳಪಾದೆ ಸರಸ್ವತಿ ಮಂದಿರದ ಬಳಿ ನಡೆದ  ಸೇವೆ ಮತ್ತು ಸಮರ್ಪಣಾ ಕಾರ್ಯಕ್ರಮ ಹಾಗೂ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ, ಮತಗಟ್ಟೆಯ ಅಧ್ಯಕ್ಷನಿಂದ ಬಿಜೆಪಿ ಪಕ್ಷ ಬೆಳೆದಿದ್ದು, ಆತನೇ ಬೂತ್‌ಗೆ ಸುಪ್ರಿಂ ಎಂದ ಅವರು ಮುಂದಿನ 20 ವರ್ಷ ಕಾಂಗ್ರೆಸ್ ಪಕ್ಷ  ನಿರುದ್ಯೋಗಿಗಳ ಪಕ್ಷವಾಗಲಿದೆ.  ಅಧ್ಯಕ್ಷರನ್ನೇ ಆಯ್ಕೆ ಮಾಡಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಹಲವು ಮಂದಿ ರಾಜ್ಯದಲ್ಲಿ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಭವಿಷ್ಯದಲ್ಲಿ ಯಾವುದೇ ಗುಡಿ, ಗೋಪುರಗಳನ್ನು ಕೆಡವದಂತೆ  ವಿಶೇಷ ವಿಧೇಯಕವನ್ನು  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು  ತಂದಿದ್ದಾರೆ. ಹಿಂದುತ್ವ ವಿಚಾರಧಾರೆಯಲ್ಲಿ ಯಾವುದೇ ರಾಜಿಯಿಲ್ಲ. ದೇವಸ್ಥಾನದ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರು  ರಾಜಕಾರಣಕ್ಕಾಗಿ,  ಹಿಂದುಗಳ ಮತ ಪಡೆಯಲು ಪ್ರಯತ್ನಿಸುತ್ತಿದೆ ಎಂದು  ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಮಂಗಳೂರು ಮಂಡಲದಲ್ಲಿ ಯಶಸ್ವಿಯಾಗಿ ಸಂಘಟನಾ ಕಾರ್ಯ  ನಡೆಯುತ್ತಿದ್ದು ಇದೇ ರೀತಿ ಮುಂದುವರಿದ್ದಲ್ಲಿ   ಮುಂಬರುವ  ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಮೈಸೂರು  ಎಲೆಕ್ಟ್ರಿಕಲ್ ಮತ್ತು ಇಂಡಸ್ಟ್ರೀಸ್‌ನ  ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ಮಂಡಲದ ಅಧ್ಯಕ್ಷ  ಚಂದ್ರಹಾಸ್ ಪಂಡಿತ್ ಹೌಸ್,  ಅಲೆಮಾರಿ ಅರೆ ಅಲೆಮಾರಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಉಲ್ಲಾಳ್, ಜಿಲ್ಲಾ ಕಾರ್ಯದರ್ಶಿ  ಸತೀಶ್ ಕುಂಪಲ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ,ಬೂತ್ ಅಧ್ಯಕ್ಷ ಮೋಹನದಾಸ್ ಬಡ್ಡೂರು, ನವೀನ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
ಮೇರಮಜಲು ಗ್ರಾ.ಪಂ. ಅಧ್ಯಕ್ಷೆ  ಜಯಶ್ರಿ ಕರ್ಕೆರಾ ಸ್ವಾಗತಿಸಿದರು. ಪುದು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಗ ವಂದಿಸಿದರು.  ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಸಮರ್ಪಣ ಕಾರ್ಯಕ್ರಮದಂಗವಾಗಿ ಮೇರಮಜಲು ಮಾತಾ ಲಕ್ಷಣಿ ಅಮ್ಮ ವೃದ್ದಾಶ್ರಮಕ್ಕೆ ಅಕ್ಕಿ ಹಾಗೂ ಹಣ್ಣುಹಂಪುಗಳನ್ನು ವಿತರಿಸಲಾಯಿತು. ಬೂತ್  ಅಧ್ಯಕ್ಷ  ಹರೀಶ್ ಪಾದೆಮಾರ್ ಅವರ ಮನೆಗೆ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ನಾಮಫಲಕ ಅಳವಡಿಸಿದರು.

More from the blog

ನೈಸರ್ಗಿಕ ವಿಪತ್ತುಗಳಿಗೆ ಮೂಲ ಕಾರಣವೆ ಅರಣ್ಯ ನಾಶ : ಮನೋಜ್ ಮಿನೇಜಸ್ 

ಬಂಟ್ವಾಳ: ನೈಸರ್ಗಿಕ ವಿಪತ್ತುಗಳಿಗೆ  ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ...

B.C. ROAD : ಕೆಂಪುಕಲ್ಲು, ಮರಳು ಅಭಾವ : ಬಂಟ್ವಾಳ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ..

ಬಂಟ್ವಾಳ: ಕೆಂಪುಕಲ್ಲು ಕಲ್ಲಿನ ರಾಜಧನವನ್ನು 40 ರೂ.ಗಳಿಂದ 280 ರೂ.ಗಳಿಗೆ ಏರಿಕೆ ಮಾಡಿರುವ ರಾಜ್ಯ ಸರಕಾರವು ಮರಳು ತೆಗೆಯುವ ಕಾನೂನನ್ನೂ ಸರಳಗೊಳಿಸದೆ ಜನರಿಗೆ ಕದಿಯಲು ಪ್ರೇರಣೆ ನೀಡುತ್ತಿದೆ. ಕೆಂಪು ಕಲ್ಲು ಹಾಗೂ ಮರಳಿನ...

‘ಶಕ್ತಿ ಯೋಜನೆʼಯಡಿ 500 ಕೋಟಿ ಮಹಿಳೆಯರ ಪ್ರಯಾಣ : ಬಿ.ಸಿ.ರೋಡ್ ನಲ್ಲಿ ಸಂಭ್ರಮಾಚರಣೆ..

ಬಂಟ್ವಾಳ: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ೫೦೦ ಕೋಟಿ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ, ತಾಲೂಕು...

ಯುವವಾಹಿನಿ ಬಂಟ್ವಾಳ ಘಟಕ : ‘ಆಟಿಡೊಂಜಿ ಕೂಟ’ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ..

ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಆಗಸ್ಟ್ 10 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯುವ ಆಟಿಡೊಂಜಿ ಕೂಟ ಸಮಾರಂಭದ ಆಮಂತ್ರಣ ಪತ್ರವನ್ನು ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಈ...