Tuesday, July 1, 2025

ನಲಿ-ಕಲಿ ಶಿಕ್ಷಣಕ್ಕೆ ಹೆಜ್ಜೆ ಹಾಕಿ ವೀಡಿಯೋ ಮುಖಾಂತರ ಕಲಿಸಿದ ಶಿಕ್ಷಕಿ ಮಂಜುಳಾ ಜನಾರ್ಧನ್

🖊️ ಯಾದವ ಕುಲಾಲ್ ಬಿ.ಸಿ.ರೋಡ್

ಕೊರೋನಾ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ನಿಂತ ನೀರಾಗಿತ್ತು. ಮಕ್ಕಳೆಲ್ಲ ಮನೆಯಲ್ಲೇ ಬಾಕಿಯಾಗಿ ಶೈಕ್ಷಣಿಕ ಚಟುವಟಿಕೆಗಳೆಲ್ಲವೂ ಸ್ತಬ್ಧವಾಗಿತ್ತು. ಆದರೆ ಆ ಸಮಯದಲ್ಲಿಯೂ ಕೆಲವು ಶಿಕ್ಷಕರು ತಮ್ಮ ಸ್ವಪ್ರಯತ್ನದಿಂದ ಉತ್ಸಾಹದಿಂದ ಈಗಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸುವಂತೆ ಮಾಡಿದ್ದಾರೆ. ಅಂತಹ ಶಿಕ್ಷಕರಲ್ಲಿ ಒಬ್ಬರು ಈ ಮಂಗಳೂರಿನ ಶಿಕ್ಷಕಿ.
ಮಂಗಳೂರಿನ ನಳಂದಾ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಶಿಕ್ಷಕಿ ಮಂಜುಳಾ ಜನಾರ್ಧನ ಈ ಪ್ರಯತ್ನ ಮಾಡಿದವರು. ಕಳೆದ ಎರಡು ತಿಂಗಳಿಂದ 3-6ನೇ ತರಗತಿವರೆಗಿನ ಪಠ್ಯಗಳ ಆಯ್ದ ಹಾಡುಗಳ ಅಭಿನಯದ ಚಿತ್ರೀಕರಣ ನಡೆಸಿ ಯೂಟ್ಯೂಬ್‌ಗೆ ಅಪ್ ಲೋಡ್ ಮಾಡಿ ಗಮನ ಸೆಳೆದಿದ್ದಾರೆ.

ಒಂದು ಪಠ್ಯದಿಂದ ಮೂರು ಹಾಡುಗಳನ್ನು ರೆಕಾರ್ಡಿಂಗ್‌ಗೆ ಆಯ್ಕೆ ಮಾಡಿದ್ದಾರೆ. ಸ್ವತಃ ಇವರಲ್ಲದೆ, ಇತರೆ ಏಳು ಮಂದಿ ವಿದ್ಯಾರ್ಥಿಗಳೂ ಸಾಥ್ ನೀಡಿದ್ದಾರೆ. ಹಾಡಿನ ಸಾಹಿತ್ಯಕ್ಕೆ ಪೂರಕವಾಗಿ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಪ್ರಸ್ತುತ ಆಂಗ್ಲ ಮಾಧ್ಯಮ ವಿಭಾಗದ ೨ನೇ ಭಾಷೆ ಕನ್ನಡ ಪಠ್ಯದ ಹಾಡುಗಳನ್ನು ಕಲಿ-ನಲಿಗೆ ಅಳವಡಿಸಲಾಗಿದೆ. ಮುಂದೆ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಪಠ್ಯಗಳ ಹಾಡುಗಳನ್ನು ಅಭಿನಯಕ್ಕೆ ಅಳವಡಿಸಲು ಉದ್ದೇಶಿಸಿದ್ದಾರೆ. ಅಲ್ಲದೇ ಪಠ್ಯಗಳ ಗದ್ಯ ಭಾಗಗಳಿಗೂ ಅಭಿನಯ ಟಚ್ ನೀಡಿ ವೀಡಿಯೋ ಅಪ್ ಲೋಡ್ ಮಾಡಲು ಚಿಂತಿಸಿದ್ದಾರೆ.
ಇಲ್ಲಿವರೆಗೆ ಎಲ್ ಕೆ.ಜಿ, ಯು.ಕೆ.ಜಿಗೆ ಕಲಿ-ನಲಿ ವೀಡಿಯೋ ಮೂಲಕ ಪಾಠ ಇದ್ದು, ಪ್ರಾಥಮಿಕ ಶಾಲೆಗೆ ವೀಡಿಯೋ ಮೂಲಕ ಕಲಿ-ನಲಿ ಪಾಠ ಇದೇ ಮೊದಲು ಎನ್ನುತ್ತಾರೆ ಶಿಕ್ಷಕಿ ಮಂಜುಳಾ ಜನಾರ್ಧನ.
ಒಂದೊಂದು ವೀಡಿಯೋ ೩-೪ ನಿಮಿಷ ಇದೆ ಅಷ್ಟೇ. ಇವರು ಅಭಿನಯಿಸಿದ ಪಠ್ಯ ಹಾಡಿಗೆ ಯೂಟ್ಯೂಬ್ ನಲ್ಲಿ ೩ ಸಾವಿರಕ್ಕೂ ಅಧಿಕ ಲೈಕ್ ಸಿಕ್ಕಿದೆ. ಹಲವು ಶಾಲೆಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಅಗರಿ ಎಂಟರ್ ಪ್ರೈಸಸ್ ಸಹಯೋಗದಲ್ಲಿ ಇದನ್ನು ನಿರ್ಮಿಸಲಾಗಿದೆ.ಮಂಜುಳಾ ಉಡುಪಿ ಹೆಸರಿನಲ್ಲಿ ಇದನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿದೆ. ಇದುವರೆಗೆ ೧೨ ಹಾಡುಗಳ ಅಭಿನಯದ ವೀಡಿಯೋ ಮಾಡಲಾಗಿದೆ. ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲು ಇನ್ನು ಆರು ಹಾಡು ಬಾಕಿ ಇದೆ. ಪ್ರತೀ ವಾರ ಒಂದು ಹಾಡಿನ ಅಭಿನಯದ ವೀಡಿಯೋ ಅಪ್ ಲೋಡ್ ಮಾಡುತ್ತಾರೆ.

*********

ವಿದ್ಯಾರ್ಥಿಗಳು ಕೋವಿಡ್ ಕಾರಣಗಳಿಂದ ಮನೆಯಲ್ಲೇ ಕುಳಿತು ಶೈಕ್ಷಣಿಕೆ ಚಟುವಟಿಕೆಗಳಿಲ್ಲದ ಕಾರಣ ಮಂಕಾಗುತ್ತಾರೆ ಎಂಬ ಕಾರಣದಿಂದ ವೀಡಿಯೋ ಮುಖಾಂತರ ಅವರನ್ನು ಕ್ರಿಯಾಶೀಲರಾಗಿ ಇಡುವುದಕ್ಕೆ ಪ್ರಯತ್ನಿಸಿದ್ದೇನೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ.
– ಮಂಜುಳಾ ಜನಾರ್ಧನ್, ಶಿಕ್ಷಕಿ

 

More from the blog

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿಷ್ಯ ವರ್ಗವಾದ ಭಾಲಾವಲಿಕಾರ್ ಮತ್ತು ರಾಜಾಪುರ ಸಾರಸ್ವತ ಸಮಾಜದ ಬಾಂಧವರ ಮಹಾ ಸಭೆ

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿಷ್ಯ ವರ್ಗವಾದ ಭಾಲಾವಲಿಕಾರ್ ಮತ್ತು ರಾಜಾಪುರ ಸಾರಸ್ವತ ಸಮಾಜದ ಬಾಂಧವರ ವಿಷೇಶ ಮಹಾ ಸಭೆಯು, ಶ್ರೀ ಕೈವಲ್ಯ ಮಠ ಅನುಯಾಯಿಗಳ ಕ್ರಿಯಾ ಸಮಿತಿ ಮತ್ತು ಭಾಲಾವಲಿಕಾರ್/ರಾಜಾಪುರ...

Bantwal vijalakshmi: ಶ್ರೀನಾಥ್ ಪ್ರಭು ಇನ್ನಿಲ್ಲ

ಬಂಟ್ವಾಳ: ಬಿ.ಸಿ.ರೋಡಿನ ವಿಜಯಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕ ಮರಕಡ ಶ್ರೀನಾಥ್ ಪ್ರಭು(೭೦) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ. ೩೦ರಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು...

ವೆನ್ ಲಾಕ್ : ಹೊರವಲಯದಲ್ಲಿ ಜಮೀನು ಕಾದಿರಿಸಲು ಸಚಿವರ ಸೂಚನೆ..

ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ದಿಯ ದ್ರಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಅವರು ಸೋಮವಾರ ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆ...

ಬೋಳಂತೂರು : ಮನೆ ದುರಸ್ತಿ ಶ್ರಮದಾನ ಕಾರ್ಯಕ್ರಮ..

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಇದರ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಭೀಮ್ ಸಂಜೀವಿನಿ ಬೋಳಂತೂರು ಇದರ ಜಂಟಿ...