ಬಂಟ್ವಾಳ: ಬಿ.ಸಿ.ರೋಡಿನ ಪ್ರಮುಖ ಕೇಂದ್ರ ಭಾಗದಲ್ಲಿರುವ ದೇವಾಲಯಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ಹಾಲೆರೆದು, ಸೀಯಾಳಭಿಷೇಕ ನಡೆಯಿತು.

ಬಿ.ಸಿ.ರೋಡಿನಲ್ಲಿರುವ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ, ಶ್ರೀ ರಕ್ತೇಶ್ವರಿ ದೇವಸ್ಥಾನ, ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಾಗನಿಗೆ ಊರ ಪರ ಊರ ಭಕ್ತರು ತನು ತಂಬಿಲ ಸೇವೆ ನೀಡಿದರು.
ಬೆಳಿಗ್ಗೆ ಯಿಂದಲೇ ನಾಗನಿಗೆ ಅಭಿಷೇಕ ಕಾರ್ಯ ನಡೆಯುತ್ತಿತ್ತು. ನಾಗರಪಂಚಮಿಯ ಪ್ರಯುಕ್ತ ಬಿ.ಸಿ.ರೋಡು ಹಾಗೂ ಬಂಟ್ವಾಳ ಪೇಟೆ ಜನನಿಬಿಡವಾಗಿತ್ತು, ವಾಹನಗಳಲ್ಲಿಯೂ ಜನರು ತುಂಬಿದ್ದರು.