Tuesday, July 1, 2025

ನಾಗಮಂಡಲೋತ್ಸವ: ಕಾರ್ಯಾಲಯದ ಉದ್ಘಾಟನೆ‌

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ರಾ.ಹೆ.75 ರ ಕಡೆಗೋಳಿಯಲ್ಲಿ ಕಾರ್ಯಾಲಯವನ್ನು ತೆರೆಯಲಾಯಿತು.  ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರಾದ ಜಗನ್ನಾಥ್ ಚೌಟರವರು ನೆರವೇರಿಸಿ,  ನಾಗಮಂಡಲೋತ್ಸವಕ್ಕೆ  ಈಗಾಗಲೇ ದಿನ ನಿಗದಿ ಯಾಗಿದ್ದು ಸಂಚಲನ ಸಮಿತಿ ರಚನೆಯಾಗಿದೆ . ಸಾರ್ವಜನಿಕರಿಗೆ ಅನುಕೂಲ ವಾಗುವಂತೆ  ಕಾರ್ಯಾಲಯವನ್ನು ತೆರೆಯಲಾಗಿದ್ದು , ನಾಗಮಂಡಲದ ಯಶಸ್ಸಿಗೆ ಸಹಕರಿಸುವಂತೆ  ಮನವಿ ಮಾಡಿದರು.   ಈ ಸಂದರ್ಭದಲ್ಲಿ   ಸ್ಥಳೀಯ  ಗಣ್ಯರಾದ ದೇವಸ್ಯ ಪ್ರಕಾಶ್ಚಂದ್ರ ರೈ , ಸದಾನಂದ ಆಳ್ವ ಕಂಪ , ಭಾಸ್ಕರ ಚೌಟ ಕುಂಭ್ಡೇಲು , ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು , ಐತಪ್ಪ ಆಳ್ವ ಸುಜೀರ್ ಗುತ್ತು , ಪೂವಪ್ಪ ಕುಲಾಲ್ ನಾಣ್ಯ , ಚಂದ್ರಹಾಸ್ ಶೆಟ್ಟಿ ರಂಗೋಲಿ , ಕೊಡಮಣ್ಣು ಕಾಂತಪ್ಪ ಶೆಟ್ಟಿ , ವಿಠ್ಠಲ್ ಸಾಲ್ಯಾನ್ ಕುಂಭ್ಡೇಲು, ಪ್ರಕಾಶ್ ಕಿದೆ ಬೆಟ್ಟು , ಗಂಗಾಧರ ಕೋಟ್ಯಾನ್ , ರಾಮಚಂದ್ರ ಮಾರಿಪಳ್ಳ , ನಾಗಪ್ಪ ಶೆಟ್ಟಿ  ಮೇರಮಜಲು. ತಾರಾನಾಥ್ ಕೊಟ್ಟಾರಿ , ಮನೋಜ್ ಆಚಾರ್ಯ   ಕಟ್ಟಡದ ಮಾಲಕ  ಮೋಹನ್  ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

More from the blog

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ) ನೂತನ ಅಧ್ಯಕ್ಷರಾಗಿ ಜಗದೀಶ್ ಎನ್ ಆಯ್ಕೆ..

ಬಂಟ್ವಾಳ : ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ವಾರ್ಷಿಕ ಮಹಾಸಭೆಯು ಜೂ 29ರಂದು ಸಂಘದ ಸಭಾಭವನದಲ್ಲಿ ನಡೆದು...

ಕೊಲೆಯತ್ನ ಪ್ರಕರಣ : 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..

ಬಂಟ್ವಾಳ : ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳದ ಬಿ ಮೂಡ ಗ್ರಾಮ ನಿವಾಸಿ ಅಕ್ಬರ್ ಸಿದ್ದಿಕ್ ಬಂಧಿತ ಆರೋಪಿ. 2011ನೇ ಸಾಲಿನಲ್ಲಿ ಬಂಟ್ವಾಳ ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ...

‘ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು’- ಒಡಿಯೂರು ಶ್ರೀ

ವಿಟ್ಲ: ಕೃಷಿ ಎಂಬುದು ಶ್ರೇಷ್ಠವಾಗಿದ್ದು, ಹೃದಯಕ್ಕೂ, ಭೂಮಿಯಲ್ಲಿಯೂ ಕೃಷಿ ನಡೆಯಬೇಕು. ಪ್ರತಿಯೊಂದಕ್ಕೂ ಸಂಸ್ಕಾರ ನೀಡುವ ಕಾರ್ಯವಾದಾಗ ಸುಸೂತ್ರವಾಗಿ ನಡೆಯುತ್ತದೆ. ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ. ಕಲೆ,...