Tuesday, February 3, 2026

ಕ್ರೀಡೆಯಿಂದ ಯುವಸಂಘಟನೆ ಸಾಧ್ಯ ವಿಜಿಸಿ ಕ್ರೀಡೋತ್ಸವದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅಭಿಪ್ರಾಯ

ಮಂಗಳೂರು: ಕ್ರೀಡೆಯಿಂದ ಮಾತ್ರ ಯುವಜನರನ್ನು ಸೆಳೆಯಲು ಸಾಧ್ಯ. ಯುವಪೀಳಿಗೆಯನ್ನು ಒಗ್ಗೂಡಿಸಿ, ಅವರಲ್ಲಿ ಸೇವಾ ಮನೋಭಾವವನ್ನು ಮೂಡಿಸುತ್ತಿರುವ ವಿಶ್ವ ಗಾಣಿಗರ ಚಾವಡಿ (ರಿ.) ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ನುಡಿದರು.

ಅವರು ಮಂಗಳೂರು ನೆಹರೂ ಮೈದಾನದಲ್ಲಿ ಭಾನುವಾರ ನಡೆದ ವಿಜಿಸಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಬಡವರಿಗೆ ವಿವಿಧ ಸೇವಾಯೋಜನೆಗಳನ್ನು ನಿರಂತರ ನೀಡುತ್ತಾ ಬರುತ್ತಿರುವ ಈ ಟ್ರಸ್ಟ್ ಅದೇ ಉದ್ದೇಶದಿಂದ ಕ್ರೀಡೋತ್ಸವ ಆಯೋಜಿಸುತ್ತಿದೆ. ಹಾಗಾಗಿ ಎಲ್ಲರೂ ಜಾತಿ-ಭೇದ ಮರೆತು ಯುವಕರ ಕಾರ್ಯಕ್ಕೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು.

ಸಾಪಲ್ಯ ಸೇವಾ ಸಂಘ(ರಿ.) ಮುಂಬೈ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ. ಸಪಲಿಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಖಿಲ ಕರ್ನಾಟಕ ಗಾಣಿಗರ ಸಂಘ ನಿರ್ದೇಶಕ ಭಾಸ್ಕರ್ ಸಪಲಿಗ ಎಡಪದವು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉದ್ಯಮಿ ಜನಾರ್ಧನ ಅರ್ಕುಳ, ದ.ಕ. ಜಿಲ್ಲಾ ಪಾಟಾಳಿ ಯಾನೆ ವಾಣೀಯ ಗಾಣಿಗರ ಸಂಘ ಅಧ್ಯಕ್ಷ ಕೆ. ರಾಮ ಮುಗ್ರೋಡಿ, ಮಂಗಳೂರು ಗಾಣಿಗರ ಸಂಘ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು, ನಿವೃತ್ತ ಯೋಧ ಸುನೀಲ್ ಮಂಜೇಶ್ವರ, ವಿಜಿಸಿ(ರಿ.) ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ದಿ ಕರಾವಳಿ ಕ್ರೆಡಿಟ್ ಕೋ.-ಆಪರೇಟಿವ್ ಸೊಸೈಟಿ ನಿರ್ದೇಶಕ ರಮೇಶ್ ಮೆಂಡನ್, ಬಂಟ್ವಾಳ ತಾಲೂಕು ಗಾಣಿಗರ ಯಾನೆ ಸಪಲಿಗರ ಸಂಘ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಗೇರ ಪಾಣೆಮಂಗಳೂರು, ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಸಂಜೀವ ಅಡ್ಯಾರ್, ದ.ಕ. ಜಿಲ್ಲಾ ಗಾಣಿಗರ ಮಹಿಳಾ ಸಂಘ ಪ್ರಧಾನ ಕಾರ್ಯದರ್ಶಿ ಶಾಲಿನಿ ಅತ್ತಾವರ, ಶ್ರೀ ಉಮಾಮಹೇಶ್ವರ ದೇವಸ್ಥಾನ ಅತ್ತಾವರ ಆಡಳಿತ ಮೊಕ್ತೇಸರ ಕೇಶವ ಮಳಲಿ, ಪ್ರಮುಖರಾದ ಪದ್ಮನಾಭ ಅತ್ತಾವರ, ಕಾಂತಪ್ಪ ಸಪಲಿಗ ಮಳಲಿ, ಪ್ರದೀಶ್ ಕುಮಾರ್ ಕೀತೇಶ್ವರ, ವಿಜಯ್ ಕುಮಾರ್ ಶಿವಪಾಲ್, ದಿನೇಶ್ ನೆಟ್ಟಿಬೈಲ್, ಅಶೋಕ್ ಕುಮಾರ್ ಕೀತೇಶ್ವರ, ಅವಿನಾಶ್ ಕೀತೇಶ್ವರ, ಉದಯಕುಮಾರ್, ಪತ್ರಕರ್ತ ದಾಮೋದರ ದೊಂಡೋಲೆ ಮತ್ತಿತರರಿದ್ದರು. ದೀಪಕ್ ಅಡ್ಯಾರ್ ನಿರೂಪಿಸಿದರು. ವಿನಯ್ ಕೀರ್ತೇಶ್ವರ, ದೀಕ್ಷಿತ್ ರೆಂಕೆದಗುತ್ತು ಸಹಕರಿಸಿದರು.

ಫಲಿತಾಂಶ: ಕ್ರಿಕೆಟ್: ಕೂಲ್ ಗೈಸ್ ಕೀತೇಶ್ವರ ಪ್ರಥಮ, ಓಂ ಫ್ರೆಂಡ್ಸ್ ಇನೋಳಿ ದ್ವಿತೀಯ, ಕಬಡ್ಡಿ: ಶ್ರೀರಾಮ್ ಶಂಭೂರು ಪ್ರಥಮ, ಗಾಣಿಗ ಸಂಘ ತೊಕ್ಕೊಟ್ಟು ದ್ವಿತೀಯ, ಭದ್ರಕಾಳಿ ನರಿಕೊಂಬು ತೃತೀಯ, ಮಹಾಲಿಂಗೇಶ್ವರ ತಂಡ ಚತುರ್ಥ. ಮಹಿಳೆಯರ ವಿಭಾಗ: ಹಗ್ಗ-ಜಗ್ಗಾಟ: ಮಹಾಲಿಂಗೇಶ್ವರ ಪ್ರಥಮ, ಬೆಳ್ತಂಗಡಿ ರೋಕರ್ಸ್ ದ್ವಿತೀಯ. ಉಳಿದಂತೆ ರಿಲೇ, ಶಾಟ್‌ಪುಟ್, ಮಡಿಕೆ ಒಡೆಯುವ ಸ್ಪರ್ಧೆ, ೧೦೦ ಮೀ ಓಟ, ಲಿಂಬೆ ಚಮಚ, ಪೊಟಾಟೋ ರೇಸ್ ಇನ್ನಿತರ ಸ್ಪರ್ಧೆಗಳು ನಡೆಯಿತು.

ಎಂಎನ್‌ಜಿ ಮಾರ್ಚ್ ೪ ವಿಜಿಸಿ ಕ್ರೀಡೋತ್ಸವ

ಸಾಪಲ್ಯ ಸೇವಾ ಸಂಘ(ರಿ.) ಮುಂಬೈ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ. ಸಪಲಿಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಸ್ಕರ್ ಸಪಲಿಗ ಎಡಪದವು, ಸಂಜೀವ ಅಡ್ಯಾರ್, ಸುನೀಲ್ ಮಂಜೇಶ್ವರ, ಹರಿಪ್ರಸಾದ್ ಶಕ್ತಿನಗರ ಮತ್ತಿತರರಿದ್ದರು.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...