ಮುಂಬಯಿ: ಇಂಟರ್‌ನ್ಯಾಷನಲ್ ಪೀಸ್ ಯೂನಿವರ್‍ಸಿಟಿ ಜರ್ಮನಿ, ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ಅಮೇರಿಕಾ (ಯುಎಸ್‌ಎ), ಕಲ್ಚರಲ್ ಬುಕ್ ಆಫ್ ರೆಕಾರ್ಡ್ಸ್ ಇಂಡಿಯಾ, ಗುಡ್ ಹೋಪ್ ಫೌಂಡೇಶನ್, ಸ್ವಸ್ಥ ಎನ್‌ವ್ಹಿರಾನ್‌ಮೆಂಟ್ ಆಂಡ್ ಹ್ಯೂಮನ್ ರೈಟ್ಸ್ ಫೌಂಡೇಶನ್ ಪ್ರಾಯೋಜಕತ್ವ ಯುನೈಟೆಡ್ ನೇಶನ್ ಸಸ್ಟೇನ್ಬೆಬಲ್ ಡೆವಲಪ್‌ಮೆಂಟ್ ಗೋಲ್ಸ್ ಸಂಸ್ಥೆಯು ಮುಂಬಯಿ ಅಲ್ಲಿನ ವಿರಾ-ಡಹಾಣು ಬಂಟ್ಸ್‌ನ ಗೌರವಾಧ್ಯಕ್ಷ, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿತು

ಶನಿವಾರ ಪೂರ್ವಾಹ್ನ ಬೆಂಗಳೂರು ವಸಂತ ನಗರದಲ್ಲಿನ ಆಶ್ರಯ ಇಂಟರ್‌ನ್ಯಾಷನಲ್ ಸಭಾಗೃಹದಲ್ಲಿ ಯುನೈಟೆಡ್ ನೇಶನ್ ಸಸ್ಟೇನ್ಬೆಬಲ್ ಡೆವಲಪ್‌ಮೆಂಟ್ ಗೋಲ್ಸ್ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ಲಾನಿಂಗ್ ಕಮಿಷನರ್ ಆಫ್ ಇಂಡಿಯಾ ಇದರ ಸಲಹೆಗಾರ ಡಾ| ಶಿವಪ್ಪ ಐಇಎಸ್, ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಸದಸ್ಯ ಡಾ| ಮಂಗಲ ಶ್ರೀಧರ್, ಗೌರವ ಅತಿಥಿಗಳಾಗಿ ಐಸಿಡಿಆರ್ ಆಂಡ್ ಟಿ ಇದರ ನಿರ್ದೇಶಕ ಮತ್ತು ಇಂಟರ್‌ನ್ಯಾಷನಲ್ ಲಾ ಅಸೋಸಿಯೇಶನ್ ಸದಸ್ಯ ಡಾ| ಶ್ರೀನಿವಾಸ್ ಎಲ್ಲೂರಿ, ರಾಯಲ್ ಅಕಾಡೆಮಿ ನಿರ್ದೇಶಕ ಮತ್ತು ಗುಡ್ ಹೋಪ್ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ| ಆರ್.ಕೆ ಸ್ಯಾಮ್‌ಸನ್, ಕಲ್ಚರ್ ಗುಡ್ ಹೋಪ್ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ| ಸುನೀತಾ ಸ್ಯಾಮ್‌ಸನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಗೌರವ ಪ್ರದಾನಿಸಿ ಅಭಿನಂದಿಸಿದರು.
ಶಂಕರ್ ಬಿ.ಶೆಟ್ಟಿ ವಿರಾರ್
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಮೂಲ್ಕಿ ಸನಿಹದ ಬಳ್ಕುಂಜೆ ಗ್ರಾಮದ ಚೆನ್ನಯಬೆನ್ನಿ ಅಲ್ಲಿನ ‘ನೇತ್ರ ನಿವಾಸ’ದ ಭೋಜಾ ಶೆಟ್ಟಿ ಮತ್ತು ನೇತ್ರಾವತಿ ಬಿ.ಶೆಟ್ಟಿ ಸುಪುತ್ರ ಶಂಕರ್ ಬಿ.ಶೆಟ್ಟಿ ಎಳೆಯ ವಯಸ್ಸಿನಲ್ಲೇ ಹೊಟ್ಟೆಪಾಡನ್ನು ಹರಸಿ ಮುಂಬಯಿಗೆ ಬಂದ ಬಾಲಕಾರ್ಮಿಕನಾಗಿ ದುಡಿದು ಕ್ರಮೇಣ ಹೊಟೆಲು ಮಾಲಿಕರಾಗಿ ಬೆಳೆದವರು. ಓರ್ವ ಯಶಸ್ವೀ ಉದ್ಯಮಿ ಆಗಿ ಸಾಧಕರೆಣಿಸಿದವರು.
ಜಾತಿ, ಮತ ಧರ್ಮವನ್ನು ಪರಿಗಣಿಸದೆ ತನ್ನೂರ ಸುಮಾರು ನೂರಾರು ಬಡವರಿಗೆ (ವಿದ್ಯಾಥಿ ವೇತನ, ವಿಧವಾ ವಿದ್ಯಾಥಿ ವೇತನ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪಿಂಚಣಿ) ಪ್ರತೀ ತಿಂಗಳಿಗೂ ಸಹಾಯಧನ ನೀಡಿ ಮಾನವೀಯತೆ ಮೆರೆಯುತ್ತಿರುವಂತೆಯೇ ಬೃಹನ್ಮುಂಬಯಿನ ಹಲವಾರು ಪ್ರತಿಷ್ಠಿತ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ದಕ್ಷತೆಯ ಸೇವೆಗೈದಿರುವುದನ್ನು ಮನವರಿಸಿ ತೆರೆಮರೆ ಯ ಅನನ್ಯ ಸಾಮಾಜಿಕ ಸೇವೆಗಾಗಿ ಈ ಗೌರವ ಪ್ರದಾನಿಸಲಾಗುವುದು.
ಕಳೆದ ವರ್ಷ ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ ಸಂಸ್ಥೆಯು ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಅಕ್ಕ ಸಂಸ್ಥೆ ಆಯೋಜಿಸಿದ್ದ ಹತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಗೌರವಿಸಿದ್ದು, ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥೆ ಮತ್ತು ಇಂಟರ್‌ನೇಶನಲ್ ಕಲ್ಚರಲ್ ಫೆಸ್ಟ್ (ಐಸಿಎಫ್) ಅಮೇರಿಕಾ ಅಲ್ಲಿನ ವಾಷಿಂಟನ್ ಡಿಸಿನಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಶಂಕರ್ ಶೆಟ್ಟಿ ಅವರಿಗೆ ‘ಇಂಟರ್‌ನೇಶನಲ್ ಮ್ಯಾನ್ ಆಫ್ ದ ಈಯರ್’ ಪ್ರಶಸ್ತಿ ಪ್ರದಾನಿಸಿತ್ತು. ದ.ಕ ಜಿಲ್ಲಾಡಳಿತ ಕಳೆದ ನವೆಂಬರ್‌ನಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ಸಂಭ್ರಮಿಸಿದ ಕನ್ನಡನಾಡು ನುಡಿಯ ೬೩ನೇ ಕರ್ನಾಟಕ ರಾಜ್ಯೋತ್ಸವ ಸಡಗರದಲ್ಲಿ ಇವರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಸ್ತದಲ್ಲಿ 2018ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ. ದ ಪೀಪಲ್’ಸ್ ಆರ್ಟ್ ಸೆಂಟರ್ ಮುಂಬಯಿ ಸಂಸ್ಥೆಯು ‘ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ-2018’ ಪ್ರದಾನಿಸಿ ಗೌರವಿಸಿತ್ತು.