Friday, June 27, 2025

ಮಹಾರಾಷ್ಟವನ್ನೇ ತತ್ತರಿಸಿದ ನಿಸರ್ಗ ಚಂಡಮಾರುತ

ಮುಂಬೈ: ಮಹಾರಾಷ್ಟ್ರ ರಾಜ್ಯಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸಿದ್ದು, ಮುಂದಿನ ಮೂರು ಗಂಟೆಗಳ ಕಾಲ ಮಹಾರಾಷ್ಟ್ರದ ಕರಾವಳಿ ತೀರ ಪ್ರದೇಶಗಳ ಮೇಲೆ ಗಂಭೀರ ಪ್ರಭಾವ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಂಡಮಾರುತ ಪರಿಣಾಮ ಮಹಾರಾಷ್ಟ್ರದ ಹಲವೆಡೆ ಈಗಾಗಲೇ ಭಾರೀ ಮಳೆ ಹಾಗೂ ಗಾಳಿ ಬೀಸುತ್ತಿದ್ದು, ಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಚಾವಣಿಗಳು ಹಾರಿ ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಪ್ರವೃತ್ತವಾಗಿದ್ದು, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ 40 ಎನ್.ಡಿ.ಆರ್. ಎಫ್. ತಂಡಗಳು ನಿಯೋಜನೆಗೊಂಡಿವೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಚಂಡಮಾರುತದ ಹೊಡೆತಕ್ಕೆ ಗುಜರಾತ್ ರಾಜ್ಯ ಕೂಡ ಸಿಲುಕಲಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಹಲವು ಜನರನ್ನು ಸ್ಥಳಾಂತರ ಮಾಡಲಾಗಿದೆ. ನಿಸರ್ಗ ಚಂಡಮಾರುತ ಅಧಿಕೃವಾಗಿ ಮಹಾರಾಷ್ಟ್ರ ಕರಾವಳಿಗೆ ಬಂದಪ್ಪಳಿಸಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಮಹಾರಾಷ್ಟ್ರ ಕರಾವಳಿಯಾದ್ಯಂತ ತನ್ನ ಪ್ರಭಾವ ಬೀರಲಿದೆ. ಇದರಂತೆ ಭಾರೀ ಮಳೆ ಹಾಗೂ ಬಿರುಗಾಳಿ ಸೃಷ್ಟಿಯಾಗಲಿದೆ ಎಂದು ಹೇಳಲಾಗುತ್ತಿದೆ. ಮುಂಬೈ ನಗರದಾದ್ಯಂತ ಅತ್ಯಂತ ಕಟ್ಟೆಚ್ಚರ ಘೋಷಿಸಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಜನ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ, ಗುಜರಾತ್, ದಿಯು ಹಾಗೂ ದಮನ್, ದಾದ್ರಾ ಹಾಗೂ ನಗರ್ ಹವೇರಿ ಚಂಡಮಾರುತದ ಪ್ರಭಾವಕ್ಕೆ ಒಳಗಾಗಲಿದ್ದು, ಈಗಾಗಲೇ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.

More from the blog

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...