(ಚಿತ್ರ / ವರದಿ: ರೊನಿಡಾ ಮುಂಬಯಿ)
ಮುಂಬಯಿ, ಆ.೨೩: ಶ್ರೀ ಕೃಷ್ಣಷ್ಟಮಿ ಉತ್ಸವದ ಶುಭಾವಸರದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯ ಹಾಗೂ ಭಕ್ತವೃಂದಕ್ಕೆ ಸಂಭ್ರಮದ ವಾತಾವರಣವಾಗಿ ಮುಂಬಯಿ ಮಹಾನಗರದಲ್ಲಿನ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಸನಿಹದಲ್ಲಿ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಹೆಸರಿನಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ವೃತ್ತ (ಚೌಕ್-ಸರ್ಕಲ್) ನಿರ್ಮಿಸಲಾಗಿ ಕಳೆದ ಗುರುವಾರ ಸಂಜೆ ಅನಾವರಣ ಗೊಳಿಸಿಸಲಾಯಿತು. ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ಮಹಾಪೌರ್ (ಮೇಯರ್) ಪ್ರಾ| ವಿಶ್ವನಾಥ ಮಹಾದೇಶ್ವರ್ ಅವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸಾಂತಕ್ರೂಜ್ ಪ್ರಭಾತ್ ಕಾಲೊನಿ ಸಿಟಿಜನ್ ಅಸೋಸಿಯೇಶನ್ ಅಧ್ಯಕ್ಷ ಶೇಖರ್ ಜೆ.ಸಾಲ್ಯಾನ್, ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ಎಂ.ವಿ ಪಂಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.