Saturday, July 5, 2025

ಉಡುಪಿಗೂ ವಕ್ಕರಿಸಿದ ಮಂಗನಕಾಯಿಲೆ

ಉಡುಪಿ: ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರ ಉಡುಪಿಯಲ್ಲಿ 1 ಪಾಸಿಟಿವ್‌ ಬಂದಿದೆ.

ಉಡುಪಿಯಲ್ಲಿ ಈ ವರ್ಷದ ಮೊದಲ ಪ್ರಕರಣ ಇದಾಗಿದ್ದು, 58 ವರ್ಷದ ಮಹಿಳೆಗೆ ಮಂಗನ ಕಾಯಿಲೆ ದೃಢಪಟ್ಟಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಫ್ಡಿ ಸೋಂಕು ಹೇಗೆ ತಗಲಿತು ಎಂಬ ಬಗ್ಗೆ ಈ ಭಾಗದ ಆಸುಪಾಸಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕುಂದಾಪುರ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ. 2019ರಲ್ಲಿ ಒಂದು ಪ್ರಕರಣ ಕಂಡುಬಂದಿತ್ತು. ಆ ಬಳಿಕ ಯಾವುದೇ ಪ್ರಕರಣಗಳು ಕಂಡುಬಂದಿರಲಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಪಿ.ಐ. ಗಡಾದ್‌ ತಿಳಿಸಿದ್ದಾರೆ.

 

More from the blog

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

Puttur : ಯುವತಿಗೆ ವಂಚಿಸಿದ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಯುವತಿಯೊಂದಿಗೆ ಮದುವೆಯಾಗುವುದಾಗಿ ದೈಹಿಕ ಸಂಪರ್ಕ  ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ...

Bhandaribettu : ರಸ್ತೆಗೆ ಉರುಳಿ ಬಿದ್ದ ಬಂಡೆಕಲ್ಲು – ಪುರಸಭೆ, ಕಂದಾಯ ಇಲಾಖೆಯಿಂದ ತೆರವು ಕಾರ್ಯ

ಬಂಟ್ವಾಳ : ಬಿಸಿರೋಡು - ವಿಲ್ಲಾಪುರಂ ರಾಜ್ಯ ಹೆದ್ದಾರಿಗೆ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ, ಕಕ್ಕೆ ಪದವು ನಿವಾಸಿ ರವಿ ಎಂಬವರ ಸ್ಕೂಟರ್ ಹಾನಿಯಾಗಿ, ಅವರು ಗಾಯಗೊಂಡಿದ್ದಾರೆ. ಬಂಟ್ವಾಳ ಪುಂಜಾಲಕಟ್ಟೆ ರಾಷ್ಟೀಯ ಹೆದ್ದಾರಿ ಬಿ.ಸಿ.ರೋಡ್...