ಬಂಟ್ವಾಳ: ಪ್ರದಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಈ ದೇಶದ ಪ್ರದಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಬಿಸಿರೋಡಿನ ಪ್ರಸಿದ್ಧ ದೇವಾಲಯವಾದ ರಕ್ತೇಶ್ವರೀ ದೇವಿ ದೇವಸ್ಥಾನ ದಲ್ಲಿ ವಿಶೇಷ ಸರ್ವ ಸೇವೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಯವರು ಪ್ರಧಾನಿಯಾದ ಸಂತೋಷ ದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಈ ನಿರ್ಧಾರ ಮಾಡಿದ್ದಾರೆ.
ಇವರ ಅವಧಿಯಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮ ಗಳ ಜೊತೆಗೆ ದೇಶ ಉನ್ನತ ಮಟ್ಟದ ಗುರುತಿಸಲಿ ಎಂಬ ಉದ್ದೇಶದಿಂದ ಪೂಜೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಕಟನೆಯ ಲ್ಲಿ ತಿಳಿಸಿದ್ದಾರೆ.
ಸಂಜೆ 5.30 ರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 7.30 ಕ್ಕೆ ವಿಶೇಷ ಸರ್ವ ಸೇವಾ ಪೂಜೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
