Saturday, July 12, 2025

ಮಾಡರ್ನ್ ಕವನ- ಕೊನೆಯ ಯುದ್ಧ

ಇಷ್ಟರವರೆಗೆ ಮಾಡಿದ ಯುದ್ಧದಲ್ಲಿ
ಸೋತಿತ್ತು ಪ್ರಕೃತಿ.
ಇದು ಕೊನೆಯ ಯುದ್ಧ..!

ಭೂಕಂಪ,ಸುನಾಮಿ,
ಬಿರುಗಾಳಿ,ಬರಗಾಲ,ಪ್ರವಾಹ
ಯಾವುದಕ್ಕೂ ಮಾನವ
ಶರಣಾಗಲಿಲ್ಲ..
ಪ್ರಕೃತಿಯ ಮೇಲೆ ತನ್ನ
ಬುದ್ಧಿವಂತಿಕೆ ತೋರಿಸುತ್ತಲೇ ಇದ್ದ.
ಗೆಲುವ ನಗೆ ಬೀರುತ್ತಲೇ ಇದ್ದ
ಅದಕ್ಕೆಂದೇ ಕೊನೆಯ ಅಸ್ತ್ರ
ಪ್ರಯೋಗ ಮಾಡಿಯೇ ಬಿಟ್ಟಿತು..!?

ನಿಧಾನವಾಗಿ ಬೆಳೆಯುತ್ತಿದ್ದ
ಮರಗಳೆಲ್ಲ ಏಕಾಏಕಿ
ಒಮ್ಮೆಲೆ ಬೆಳೆಯಲು ಪ್ರಾರಂಭಿಸಿದವು..
ಮಾನವನ ಸೈನ್ಸ್ ಪ್ರಕಾರ
ಮರಗಳ ಬೇರು
ಗಂಟೆಗೆ ಒಂದು ಕಿಲೋಮೀಟರ್ ನಷ್ಟು
ಬೇರು ಬೆಳೆದರೆ
ಮರ ಗಂಟೆಗೆ ಹತ್ತು ಕಿಲೋಮೀಟರ್
ಬೆಳೆಯುತ್ತಿತ್ತು..!
ಈಗ ಗಿಡವು ಮರ..
ಮರ ಹೆಮ್ಮರ..
ಹೆಮ್ಮರ ಆಕಾಶವನ್ನೇ ಮುಟ್ಟುವ ಮರ..!

ಎಲ್ಲೆಂದರಲ್ಲಿ ಬೇರು..
ರಸ್ತೆ, ನಿಲ್ದಾಣ
ಮನೆಯೊಳಗೆ..,
ಮನೆ ಮೇಲೆ,
ಕಟ್ಟಡ ಸುತ್ತಿ ಗೋಡೆಗಳು
ಬಿರುಕು ಬಿಡುತ್ತಿದ್ದವು..
ಕೆಲವು ಕುಸಿಯುತ್ತಿದ್ದವು.

ಬೇರು ತುಂಡರಿಸ ಬೇಕೆನ್ನುವ
ಹೊತ್ತಿಗೆ
ಇನ್ನೊಂದು ಬೇರು ಬೆಳೆಯುತ್ತಿತ್ತು..
ಬುದ್ಧಿವಂತಿಕೆ ಉಪಯೋಗಿಸಿ
ಮರಕ್ಕೆ ಸುತ್ತುವರಿದು,
ಒಮ್ಮೆಲೆ ಸುತ್ತಲಿನ ಬೇರ ತುಂಡರಿಸುವ ಹೊತ್ತಿಗೆ
ಮರ ಹೆಮ್ಮರವಾಗಿರುತ್ತಿತ್ತು
ಬಿದ್ದರೆ ಅದರಡಿಗೆ ಸಿಕ್ಕಿ
ಸಾವು ಗ್ಯಾರಂಟಿ…

ಮನೆ ಕಳೆದುಕೊಂಡ
ಆಸ್ತಿ ಪಾಸ್ತಿ ಏನು ಉಳಿದಿಲ್ಲ..
ಎಲ್ಲೆಂದರಲ್ಲಿ ಬೃಹತ್ ಮರಗಳು
ರಸ್ತೆ ಗಳಿಲ್ಲ,ಗಾಡಿ ಓಡಾಡಲಾಗುವುದಿಲ್ಲ.
ವಿಮಾನ ಹಾರಾಟ ಸಾಧ್ಯವೇ ಇಲ್ಲ.
ಯಾವರೀತಿಯ ಸಂಪರ್ಕವೂ ಉಳಿದಿಲ್ಲ
ನನ್ನದು ಎನ್ನುವುದು ಏನಿಲ್ಲ,
ದೇಹವೊಂದನ್ನು ಬಿಟ್ಟು..!

ಆದರೂ ಆಹಾರಕ್ಕೆ ಕೊರತೆ ಇಲ್ಲ
ಗಿಡ ಮರವಾಗಿದೆ.
ಮರ ಹೆಮ್ಮರವಾಗಿದೆ.
ಹಣ್ಣು ಹಂಪಲು ಬೇಕಾದಷ್ಟಿತ್ತು..
ಈಗ ಮರದ ಪೊಟರೆಯೇ ಮನೆ.
ಅಂದಿನ ಕಾಡು ಜನರಂತೆ..

ಮಾನವ ಕುಲ ನಾಶ ಹೇಗೂ ಆಗಬಹುದು..
ಉಳಿಯಬೇಕಾದರೆ
ಪ್ರಕೃತಿ ಉಳಿಯಬೇಕು..!

ಯತೀಶ್ ಕಾಮಾಜೆ

More from the blog

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...