Monday, January 26, 2026

ಮಾಡರ್ನ್ ಕವನ- ಬ್ರೇಕಿಂಗ್ ನ್ಯೂಸ್

ಅಟ್ಟ ಸೇರಿದ
ಕೆರೆ ಹಾವನ್ನ
ಹೊರ ಹಾಕುವಲ್ಲಿ
ಯಶಸ್ವಿಯಾದೆ..!
ಆದರೆ…!?

ಪೇಪರ್ ಓದು ಬಿಟ್ಟು
ಬ್ರೇಕಿಂಗ್ ನ್ಯೂಸ್ ಗೆ ಅಂಟಿಬಿಟ್ಟಿದ್ದೆ..
ಟಿವಿ ಆನ್ ಮಾಡಿ
ಕಣ್ಣರಳಿಸಿ ನೋಡಿದಾಗ
“ನಿನ್ನೆ ಇದೇ ಮನೆಗೆ ಕೆರೆ ಹೊಕ್ಕಿದ್ದು
ಬನ್ನಿ ನೋಡುವ
ಆ ಹಾವು ಹೇಗಿತ್ತು,
ಎಲ್ಲಿಂದ ಬಂತು,
ಇಲ್ಲಿಗ್ಯಾಕೆ ಬಂತು.,
ಎಷ್ಟುದ್ದ, ಎಷ್ಟು ವಯಸ್ಸು..!?”
ಎಲ್ಲಾ ನ್ಯೂಸ್ ಚಾನಲ್ ನಲ್ಲೂ
ಅದೇ ಸುದ್ದಿ..!
ಬರುತ್ತಿದ್ದದ್ದು ನಮ್ಮನೆ ಚಿತ್ರವೇ..
ಬಾಗಿಲು ತೆಗೆದು ನೋಡಿದ್ದು
ಅವರು ಬೆಲ್ ಮಾಡಿದ್ದು
ಒಂದೇ ಸಮಯ..!

ನಾಲ್ಕು ಮೈಕ್
ನಾಲ್ಕು ಕ್ಯಾಮರಾ
ಎಂಟು ಜನ
ಹೇಳಿ ಸರ್ ಏನಾಯ್ತು..?
ಎಲ್ಲಿಂದ ಬಂತು..?
ಹೇಗಿತ್ತು..?
ಏನು ಮಾಡಿದ್ರಿ..
ಪ್ರಶ್ನೆಗಳ ಸುರಿಮಳೆ.
ನಮ್ಮನೆ ಟಿವಿಯಲ್ಲೂ ನಾನೇ..
ಉತ್ತರಗಳಿಲ್ಲದ ಬೆಪ್ಪನಾಗಿ..!

ಕೆರೆ ಬರುವುದೇನು
ಹೊಸತಲ್ಲ..
ಅಜ್ಜ ಇದ್ದಾಗಲೂ ಬರುತ್ತಿತ್ತು..
ಅಪ್ಪ ಇರುವಾಗಲೂ ಓಡುತ್ತಿತ್ತು.
ನನ್ನ ಮೊದಲ ರಾತ್ರಿಗೇ ಬಂದಿತ್ತು
ಇಂದು ಮಗ ಇದ್ದಾಗಲೂ ಬಂದಿತ್ತು..
ನಿನ್ನೆ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ
ಫೇಸ್ ಬುಕ್ ವಾಲ್ನಲ್ಲಿ
ಹಂಚಿಕೊಂಡಿದ್ದೆನಷ್ಟೇ…
ಅದೇ ನ್ಯೂಸ್ ಚಾನಲ್ ಗೆ ನ್ಯೂಸ್ ಆದದ್ದು..

ಬ್ರೇಕಿಂಗ್ ನ್ಯೂಸ್..
ನಾಳೆ ನಿಮ್ಮದೇ ಮನೆಯಲ್ಲಿ
ನೀವು ಉಚ್ಚೆ ಹುಯ್ದದ್ದು
ಆಗಬಹುದು…!?

ಯತೀಶ್ ಕಾಮಾಜೆ

More from the blog

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ವಿಟ್ಲ ಜಾತ್ರೋತ್ಸವದಲ್ಲಿ ಮನರಂಜಿಸಿದ ವಿಟ್ಲೋತ್ಸವ..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೋತ್ಸವದಲ್ಲಿ ಮಂಗಳವಾರ ರಾತ್ರಿ ದೇವರ ಹೂ ತೇರು ಉತ್ಸವ ನಡೆಯಿತು. ವಿಆರ್ ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33...

ಮಾಣಿ : ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮ..

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ...