Thursday, February 13, 2025

ಬಾಯ್ತೆರೆದು ನಿಂತಿದೆ ಮೊಡಂಕಾಪುವಿನಲ್ಲಿ ರಸ್ತೆ

ಬಂಟ್ವಾಳ: ಪುರಸಭೆಯ
ಕುಡಿಯುವ ನೀರಿನ ಪೈಪ್ ಕಾಮಗಾರಿಯಿಂದ ರಸ್ತೆಯೊಂದು ಕುಸಿಯುವ ಬೀತಿಯಲ್ಲಿದೆ.

ಮೊಡಂಕಾಪು ಎಂಬಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದುಹೋಗಿರುವ ಭಾಗದಲ್ಲಿ ಕುಸಿತ ಕಂಡು ಬಂದಿದ್ದು ಇಲ್ಲಿನ ನಿವಾಸಿಗಳು ಭಯಬೀತರಾಗಿದ್ದಾರೆ.
ಪೈಪ್ ಅಳವಡಿಕೆ ಕಾಮಗಾರಿಯಿಂದಾಗಿ ಅ ಜಾಗದಲ್ಲಿ ಮಣ್ಣು ಒಳಕ್ಕೆ ಕುಸಿದಿದ್ದು ಜೊತೆಗೆ ರಸ್ತೆ ಕೂಡಾ ಕುಸಿಯುತ್ತಿದೆ.
ಮೊಡಂಕಾಪು ಚರ್ಚ್ , ಚರ್ಚ್ ಸ್ಕೂಲ್ ಸಹಿತ ಮೂರು ವಿದ್ಯಾಕೇಂದ್ರಗಳಿವೆ, ಒಂದು ದೇವಸ್ಥಾನ ಇದೆ, ಇಲ್ಲಿ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರಿಗೆ ಈ ಗುಂಡಿ ಉಂಟಾದ್ದರಿಂದ ಸಾಕಷ್ಟು ತೊಂದರೆಗಳು ಅಗುತ್ತಿವೆ.
ಒಬ್ಬ ಮನುಷ್ಯ ನ ಎತ್ತರಕ್ಕೆ ಈ ಗುಂಡಿಯಿದ್ದು, ರಾತ್ರಿ ಹೊತ್ತಿನಲ್ಲಿ ಅಪರೂಪವಾಗಿ ಬರುವ ದ್ಚಿಚಕ್ರ ವಾಹನ ಸವಾರರು ಮತ್ತು ಪಾದಚಾರಿ ಗಳು ಆಯ ತಪ್ಪಿ ಗುಂಡಿಯೊಳಗೆ ಬಿದ್ದರೆ ಸಾವು ನಿಶ್ಚಿತ.
ಇಂತಹ ಸಾವು ನೋವುಗಳು ಸಂಭವಿಸುವ ಮೊದಲು ಸರಿ ಮಾಡಿಕೊಡುವಂತೆ ಪುರಸಭೆಗೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ. ಆದರೆ ಈ ವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಇವರದ್ದು.

ಈ ಸಮಸ್ಯೆ ಯನ್ನು ಬಗೆಹರಿಸದಿದ್ದರೆ,
ರಸ್ತೆ ಕುಸಿತ ದಿಂದಾಗಿ ಬಿಸಿರೋಡು ಕೈಕಂಬದಿಂದ ಮೊಡಂಕಾಪು ಮೂಲಕ ಪೊಳಲಿ ಕೈಕಂಬಕ್ಕೆ ತೆರಳುವ ಬಸ್ ಸಂಚಾರಕ್ಕೆ ಅಡಚಣೆಯಾಗುವ ಸಂದರ್ಭಗಳು ಕೂಡ ಬರಬಹುದು ಎಂದು ಇಲ್ಲಿನ ನಿವಾಸಿಗಳು ತಿಳಿಸುತ್ತಾರೆ.
ಪುರಸಭೆಯ ವ್ಯಾಪ್ತಿಯಲ್ಲಿ ಈ ಮಲ್ಟಿಪರ್ಪಸ್ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆ ನಿಜವಾಗಿಯೂ ಉತ್ತಮ ವಾಗಿದೆ. ಆದರೆ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಪದೇ ಪದೇ ಸಮಸ್ಯೆ ಗಳು ಉದ್ಬವಿಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಆರೋಪ ಗಳಿಗರ ಈ ಯೋಜನೆ ಗುರಿಯಾಗಿದೆ.
ಹಾಗಾಗಿ ಸಂಭಂದಿಸಿದ ಇಲಾಖಾ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...