Saturday, June 28, 2025

ಬಂಟ್ವಾಳದ 40 ಶಾಲೆಗಳ ಅಭಿವೃದ್ಧಿಗೆ 2.66 ಕೋಟಿ ರೂ. ಅನುದಾನ ಬಿಡುಗಡೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಮರುನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗಳಿಗೆ ಸುಮಾರು 2.66 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 40 ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಬಗ್ಗೆ ಕೊಠಡಿಗಳ ಮರುನಿರ್ಮಾಣ ದುರಸ್ತಿ ಕಾಮಗಾರಿಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು 2,66,50,000 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಯಾವ ಶಾಲೆಗಳಿಗೆ ಏಷ್ಟೆಷ್ಟು ಅನುದಾನ?:
1. ಗೋಳ್ತಮಜಲು ಗ್ರಾಮದ ಸ.ಹಿ.ಪ್ರಾ. ಶಾಲೆ ಗೋಳ್ತಮಜಲು – 8.50 ಲಕ್ಷ
2. ಬಿ.ಮೂಡ ಗ್ರಾಮದ ಸ.ಹಿ.ಪ್ರಾ. ಶಾಲೆ ಬಿ.ಮೂಡ – 8 ಲಕ್ಷ
3. ಅಮ್ಮುಂಜೆ ಗ್ರಾಮದ ಸ.ಹಿ.ಪ್ರಾ. ಶಾಲೆ ಬೆಂಜನಪದವು – 2.50 ಲಕ್ಷ
4. ಕಾವಳಪಡೂರು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಧ್ವ – 2.50 ಲಕ್ಷ
5. ಪಾಣೆಮಂಗಳೂರು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಾಣೆಮಂಗಳೂರು -6 ಲಕ್ಷ
6. ಕೊಯಿಲ ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊಯಿಲ- 3 ಲಕ್ಷ
7. ಪೆರಾಜೆ ಗ್ರಾಮದ ದ.ಕ.ಜಿ.ಪ.ಹಿ.ಪ್ರಾ. ಶಾಲೆ ಪೆರಾಜೆ – 5 ಲಕ್ಷ
8. ಬಂಟ್ವಾಳ ಕಸ್ಬಾ ಗ್ರಾಮದ ಸ.ಹಿ.ಪ್ರಾ. ಶಾಲೆ ಕುದನೆಗುಡ್ಡೆ – 3 ಲಕ್ಷ
9. ಕನ್ಯಾನ ಗ್ರಾಮದ ಸ.ಕಿ.ಪ್ರಾ. ಶಾಲೆ ಅಂಗ್ರಿ – 6 ಲಕ್ಷ
10. ಕನ್ಯಾನ ಗ್ರಾಮದ ಸ.ಕಿ.ಪ್ರಾ. ಶಾಲೆ ಮಂಡ್ಯೂರು – 5.50 ಲಕ್ಷ
11. ಕನ್ಯಾನ ಗ್ರಾಮದ ಸ.ಹಿ.ಪ್ರಾ. ಶಾಲೆ ಕಣಿಯೂರು – 3 ಲಕ್ಷ
12. ಚೆನ್ನೈತ್ತೋಡಿ ಗ್ರಾಮದ ಸ.ಹಿ.ಪ್ರಾ. ಶಾಲೆ ಶಿವನಗರ – 2.50 ಲಕ್ಷ
13. ಮಣಿನಾಲ್ಕೂರು ಗ್ರಾಮದ ಸ.ಹಿ.ಪ್ರಾ. ಶಾಲೆ ಮಣಿನಾಲ್ಕೂರು -6.50 ಲಕ್ಷ
14. ಕಡೇಶ್ವಾಲ್ಯ ಗ್ರಾಮದ ಸ.ಹಿ.ಪ್ರಾ. ಶಾಲೆ ಶೇರಾ – 6.50 ಲಕ್ಷ
15. ಅನಂತಾಡಿ ಗ್ರಾಮದ ಸ.ಕಿ.ಪ್ರಾ. ಶಾಲೆ ಬಂಟ್ರಿಂಜ – 6.50 ಲಕ್ಷ
16. ಸಾಲೆತ್ತೂರು ಗ್ರಾಮದ ಸ.ಹಿ.ಪ್ರಾ. ಶಾಲೆ ಸಾಲೆತ್ತೂರು – 15 ಲಕ್ಷ
17. ಕೊಳ್ನಾಡು ಗ್ರಾಮದ ಸ.ಹಿ.ಪ್ರಾ. ಶಾಲೆ ತಾಳಿತ್ತನೂಜಿ – 10 ಲಕ್ಷ
18. ಮಂಚಿ ಗ್ರಾಮದ ಸ.ಹಿ.ಪ್ರಾ. ಶಾಲೆ ಕಜೆ – 5.50 ಲಕ್ಷ
19. ಸಾಲೆತ್ತೂರು ಗ್ರಾಮದ ಸ.ಹಿ.ಪ್ರಾ. ಶಾಲೆ ಬೊಳ್ಮಾರು – 5 ಲಕ್ಷ
20. ಕರಿಯಂಗಳ ಗ್ರಾಮದ ಸ.ಹಿ.ಪ್ರಾ. ಶಾಲೆ ಪಲ್ಲಿಪಾಡಿ – 3 ಲಕ್ಷ
21. ಮಂಚಿ ಗ್ರಾಮದ ಸ.ಹಿ.ಪ್ರಾ. ಶಾಲೆ ಪುದೊಟ್ಟು – 6.50 ಲಕ್ಷ
22. ಮಂಚಿ ಗ್ರಾಮದ ಸ.ಹಿ.ಪ್ರಾ. ಶಾಲೆ ಮಂಚಿ ಕುಕ್ಕಾಜೆ – 9 ಲಕ್ಷ
23. ಕೊಳ್ನಾಡು ಗ್ರಾಮದ ಸ.ಕಿ.ಪ್ರಾ. ಶಾಲೆ ಖಂಡಿಗ – 2 ಲಕ್ಷ
24. ಕೊಳ್ನಾಡು ಗ್ರಾಮದ ಸ.ಹಿ.ಪ್ರಾ. ಶಾಲೆ ನಾರ್ಶ ಮೈದಾನ – 8 ಲಕ್ಷ
25. ಸಜಿಪಮೂಡ ಗ್ರಾಮದ ಸ.ಕಿ.ಪ್ರಾ. ಶಾಲೆ ಕೋಮಾಲೆ – 1.50 ಲಕ್ಷ
26. ನೆಟ್ಲಮುಡ್ನೂರು ಗ್ರಾಮದ ಸ.ಹಿ.ಪ್ರಾ. ಶಾಲೆ ನೇರಳಕಟ್ಟೆ -5 ಲಕ್ಷ
27. ಕನ್ಯಾನ ಗ್ರಾಮದ ಸ.ಹಿ.ಪ್ರಾ. ಶಾಲೆ ದೇಲಂತಬೆಟ್ಟು – 5.50 ಲಕ್ಷ
28. ಕಡೇಶ್ವಾಲ್ಯ ಗ್ರಾಮದ ಸ.ಹಿ.ಪ್ರಾ. ಶಾಲೆ ಕೆಮ್ಮಾನುಪಲ್ಕೆ – 6 ಲಕ್ಷ
29. ಬಡಗಕಜೆಕಾರು ಗ್ರಾಮದ ಸ.ಹಿ.ಪ್ರಾ. ಶಾಲೆ ಬಡಗಕಜೆಕಾರು – 10 ಲಕ್ಷ
30. ಬಡಗಕಜೆಕಾರು ಗ್ರಾಮದ ಸ.ಹಿ.ಪ್ರಾ. ಶಾಲೆ ಪಾಂಡವರಕಲ್ಲು – 5 ಲಕ್ಷ
31. ಚೆನ್ನೈತ್ತೋಡಿ ಗ್ರಾಮದ ಸ.ಹಿ.ಪ್ರಾ. ಶಾಲೆ ಶಿವನಗರ ಮಾವಿನಕಟ್ಟೆ – 2.50 ಲಕ್ಷ
32. ಬಿ.ಮೂಡ ಗ್ರಾಮದ ಸ.ಪ್ರೌ. ಶಾಲೆ ಅಜ್ಜಿಬೆಟ್ಟು ಬಿ.ಮೂಡ – 6 ಲಕ್ಷ
33. ಅಮ್ಮುಂಜೆ ಗ್ರಾಮದ ಸ.ಪ್ರೌ. ಶಾಲೆ ಬೆಂಜನಪದವು – 13 ಲಕ್ಷ
34. ಕಾವಳಪಡೂರು ಗ್ರಾಮದ ಸ.ಪ್ರೌ. ಶಾಲೆ ಕಾವಳಪಡೂರು, ವಗ್ಗ – 5 ಲಕ್ಷ
35. ಸಂಗಬೆಟ್ಟು ಗ್ರಾಮದ ಸ.ಪ್ರೌ. ಶಾಲೆ ಸಿದ್ದಕಟ್ಟೆ – 20 ಲಕ್ಷ
36. ಪಿಲಾತಬೆಟ್ಟು ಗ್ರಾಮದ ಸ.ಪ್ರೌ. ಶಾಲೆ ನಯನಾಡು – 3 ಲಕ್ಷ
37. ಕಾವಳಮೂಡೂರು ಗ್ರಾಮದ ಸ.ಪ್ರೌ. ಶಾಲೆ ಕಾವಲಕಟ್ಟೆ – 5.50 ಲಕ್ಷ
38. ಬಿ.ಮೂಡ ಗ್ರಾಮದ ಸ.ಪ್ರೌ. ಶಾಲೆ ಕೊಡಂಗೆ – 2.50 ಲಕ್ಷ
39. ಮಣಿನಾಲ್ಕೂರು ಗ್ರಾಮದ ಸ.ಪ.ಪೂ.ಕಾ. (ಪ್ರೌಢಶಾಲಾ ವಿಭಾಗ) ಮಣಿನಾಲ್ಕೂರು – 12 ಲಕ್ಷ
40. ಚೆನ್ನೈತ್ತೋಡಿ ಗ್ರಾಮದ ಸ.ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ವಾಮದಪದವು – 2 ಲಕ್ಷ

 

ಒಟ್ಟು ಮೊತ್ತ : 2,66,50,000/-

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

Bantwal : ಬಂಟ್ವಾಳ ಪುರಸಭೆಯ ವಿಶೇಷ ಸಭೆ : ಪೌರಕಾರ್ಮಿಕರ ವೇತನ ಕುರಿತು ಚರ್ಚೆ..

ಬಂಟ್ವಾಳ : ಪೌರಕಾರ್ಮಿಕರ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭಾ ವಿಶೇಷ ಸಭೆ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಪುರಸಭೆಯ ಪೌರಕಾರ್ಮಿಕರ ವಿಶೇಷ ನೇಮಕಾತಿ ಹಾಗೂ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಇಂದಿನಿಂದ ಮುಹರ್ರಮ್ ತಿಂಗಳು ಪ್ರಾರಂಭ : ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ..

ಮಾಣಿ: ಗುರುವಾರ ರಾತ್ರಿ ಚಂದ್ರದರ್ಶನವಾದ ಮಾಹಿತಿ ಪ್ರಬಲವಾಗಿರುವುದರಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹಾಗೂ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಬಳಿ ಖಚಿತವಾದ ಕಾರಣ ಇಂದಿನಿಂದ ಮುಹರ್ರಮ್ ಪ್ರಾರಂಭ ಎಂದು ಖಾಝಿ...