ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಭಾಗದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲನ್ಯಾಸವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ನೆರೆವೇರಿಸಿದರು.


ಮುಖ್ಯವಾಗಿ ಪಿಲಿಂಜ ರಸ್ತೆ ಕಾಮಾಗಾರಿ-4.25 ಲಕ್ಷ, ನೆಟ್ಲ ಕೇನ್ಲ ರಸ್ತೆ-3.75 ಲಕ್ಷ, ನೆಟ್ಲ ಶಾಲಾ ಬಳಿ ಕುಡಿಯುವ ನೀರಿನ ಟ್ಯಾಂಕ್-8.5 ಲಕ್ಷ, ನೆಟ್ಲ ಕಲ್ಲಗುಡ್ಡೆ ರಸ್ತೆ-4.5 ಲಕ್ಷ, ಪಂಚಾಯತ್ ಅನುದಾನದ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಾ.ಪಂ ಸದಸ್ಯ ಮಹಾಬಲ ಆಳ್ವ, ಆಕ್ರಮ-ಸಕ್ರಮ ಸದಸ್ಯರಾದ ರಮಾನಾಥ ರಾಯಿ, ಯಶೋಧರ ಕರ್ಬೆಟ್ಟು, ಪಂ.ಸದಸ್ಯರಾದ ಗಿರಿಶ್ ಕುಲಾಲ್, ಗುರುವಪ್ಪ ಗೌಡ, ಸುಚಿತ್ರ ಗಟ್ಟಿ, ಪೂರ್ಣಿಮ ಶ್ರೀಧರ ರಾವ್, ಪ್ರಮುಖರಾದ ಯೋಗಿಶ್ ಗಟ್ಟಿ, ಮುತ್ತುರಾಜ್, ನವೀನ್ ಗಟ್ಟಿ, ಕುಮಾರಸ್ವಾಮಿ, ನವೀನ್ ಶೆಟ್ಟಿ, ಅನಿಶ್ ದೇವಾಡಿಗಾ, ಅಭಿಷೇಕ್ ಶೆಟ್ಟಿ, ಅಶೋಕ್ ಪಿಲಿಂಜ, ದಯಾನಂದ ಗಟ್ಟಿ, ಸುನೀಲ್ ಗಟ್ಟಿ, ಲೋಕೆಶ್ ಗಟ್ಟಿ, ರಮೇಶ್ ಗೌಡ ಉಪಸ್ಥಿತರಿದ್ದರು.












