ಬಂಟ್ವಾಳ: ಬಂಟ್ವಾಳ ತಾಲೂಕು ಆಸ್ಪತ್ರೆಗೆ ಮಂಗಳೂರು ಕ್ಯಾಡ್ ಸಂಸ್ಥೆಯವರು ನೀಡಿದ 5 ಇ.ಸಿ.ಜಿ. ಮೆಷಿನ್ ಗಳನ್ನು ಕ್ಯಾಡ್ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಹಸ್ತಾಂತರಿಸಿದರು.


ಬಂಟ್ವಾಳ ತಾಲೂಕು ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿದ್ದ ಇ.ಸಿ.ಜಿ. ಮೆಷಿನ್ ನೀಡುವಂತೆ ಬಂಟ್ವಾಳ ಶಾಸಕರ ಮನವಿ ಮೇಲೆ ಕ್ಯಾಡ್ ಸಂಸ್ಥೆಯವರು ಈ ಸೌಲಭ್ಯ ನೀಡಿದ್ದಾರೆ.

ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಪ್ರಸ್ತುತ ಎಲ್ಲಾ ವಿಭಾಗದ ವೈದ್ಯರ ತಂಡ ಈ ಆಸ್ಪತ್ರೆಯಲ್ಲಿ ಇದ್ದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕೆಲವೊಂದು ಅಗತ್ಯವಾಗಿರುವ ವ್ಯವಸ್ಥೆಗಳನ್ನು ಶೀಘ್ರದಲ್ಲಿಯೇ ಮಾಡುವ ಭರವಸೆ ನೀಡಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್., ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಪುಷ್ಪಲತಾ, ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು, ಕೆ.ಎಂ.ಸಿ. ಆಸ್ಪತ್ರೆಯ ಪ್ರದೀಪ್ ಉಪಸ್ಥಿತರಿದ್ದರು.












