Wednesday, June 25, 2025

ಕೊರೊನಾ ಹತೋಟಿ ಬಗೆಗಿನ ಗ್ರಾಮ ಪಂಚಾಯತ್ ಟಾಸ್ಕ್ ಪೊರ್ಸ್ ಸಮಿತಿಗಳ ಕಾರ್ಯವೈಖರಿ ಶ್ಲಾಘನೀಯಾ- ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗ ಹತೋಟಿಗೆ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ರಚಿಸಲ್ಪಟ್ಟ ಟಾಸ್ಕ್ ಪೊರ್ಸ್ ಸಮಿತಿಗಳ ಸರ್ವ ಸದಸ್ಯರ ಕಾರ್ಯವೈಖರಿಯಿಂದ ಬಂಟ್ವಾಳ ದಲ್ಲಿ ಸಹ ಕೊರೊನಾ ಸ್ವಲ್ಪ ಮಟ್ಟಿಗೆ ಉಲ್ಬಣಿಸಿದರೂ ಸಹ ತೀರಾ ಹತೋಟಿಯಲ್ಲಿ ಇರುವುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಟಾಸ್ಕ್ ಪೊರ್ಸ್ ಸಮಿತಿಗಳ ಸಾದನೆ ಶ್ಲಾಘನೀಯವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಇಂದು ಮಧ್ಯಾಹ್ನ ಸಂಗಬೆಟ್ಟು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಗ್ರಾಮ ಪಂಚಾಯತ್ ಟಾಸ್ಕ್ ಪೊರ್ಸ್ ಸಮಿತಿ ಸಭೆ ನಡೆಸಿದರು.
ಸಮಿತಿಯ ಅಧ್ಯಕ್ಷರಾಗಿ ಸದಸ್ಯರಾಗಿ ಎಲ್ಲಾ ಇಲಾಖೆಯ ವತಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ಅವಲೋಕನ ಮಾಡುವುದರೊಂದಿಗೆ ಮುಂದೆ ಅನುಸರಿಸುವ ಕಾರ್ಯಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ಪಡಿತರ ಚೀಟಿ ಇಲ್ಲದವರಿಗೆ ಹೆಸರು ಪಟ್ಟಿ ತಯಾರಿಸಿ ಕೊಡಲು ಸೂಚನೆ ನೀಡಿದರು. ಸಾಮಾಜಿಕ ಅಂತರ ಮತ್ತು ಕಾರ್ಮಿಕರಿಗೆ ಸರಕಾರ ಸೂಚಿಸಿದ ಮಾರ್ಗ ಸೂಚಿಗಳನ್ನು ಸ್ಥಳೀಯ ಕಂಪೆನಿಗಳು, ಘಟಕಗಳು ಪಾಲನೆ ಮಾಡುತ್ತೀರುವ ಬೆಗ್ಗೆ ಖಾತ್ರಿ ಪಡಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಮೇತ ಪಂಚಾಯತ್ ಸದಸ್ಯರಿಗೆ ತಿಳಿಸಿದರು.
ದೂರ ದೂರದಿಂದ ಊರಿನಿಂದ ಬಂದಿರುವ ನೆರೆಹೊರೆಯ ನಮ್ಮ ಬಂದುಗಳಿಗೆ 28 ದಿನ ಕೊರಂಟೈನ್ ಇರುವಂತೆ ಸಮಿತಿ ಸದಸ್ಯರು ಮನದಟ್ಟು ಮಾಡಿಸ ಬೇಕೆಂದರು. ಗ್ರಾಮದಲ್ಲಿ ಯಾವುದೇ ಸಮಸ್ಯೆ ಬಂದರೂ ಸ್ಥಳೀಯವಾಗಿ ಬಗೆಹರಿಸಿಕೊಳ್ಳಿ.
ಸಾದ್ಯವಾಗದೇ ಹೋದರೆ ನನ್ನ ಗಮನಕ್ಕೆ ತನ್ನಿ ನಾನು ಯಾವಗಳೂ ಕ್ಸೆತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ದನಿದ್ದೇನೆ ಎಂದರು. ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಬದಿಂದ ಸರಕಾರ ದ ವಿವಿದ ಅಧಿಕಾರಿ ಗಳೊಂದಿಗೆ ನಿಕಟ ಸಂಪರ್ಕ ಹೊಂದಿಕೊಂಡು ಪ್ರಚಾರ ಪಡೆಯದೆ ನನ್ನ ಇತಿಮಿತಿಯಲ್ಲಿ ಸಹಕಾರ ಮಾಡುತೀರುವುದಾಗಿ ಹೇಳಿದರು.ಒಟ್ಟಿನಲ್ಲಿ ಗ್ರಾಮಾಂತರ ಭಾಗದಲ್ಲಿ ಅರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು,ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಕರಣೀಕರು, ಗ್ರಾಮ ಸಹಾಯಕರು.ಅರೋಗ್ಯ ಸಹಾಯಕಿಯರು, ವೈದ್ಯರು ಗಳು, ಬಿಟ್ ಪೋಲಿಸ್ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯತಿ,  ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ ಸದಸ್ಯರು ಒಟ್ಟಾರೆಯಾಗಿ ಸೇವೆಯ ರೂಪದಲ್ಲಿ ಕೆಲಸವನ್ನು ಮಾಡುತ್ತಿರುವುದು ಕೊರೊನಾ ಹತೋಟಿಗೆ ಸಾದ್ಯವಾಗಿದೆ ಎಂದರು‌.

ಕೊರೊನಾ ರೋಗಿಯ ಬಗ್ಗೆ ತಾತ್ಸರ ಬೇಡ‌-
ಕೊರೊನಾ ರೋಗದ ಬಗ್ಗೆ ಎಚ್ಚರಿಕೆಯಿಂದ ಇರೋಣ ಎಂದು ಸಮಿತಿ ಸದಸ್ಯರಿಗೆ ಶಾಸಕ ರಾಜೇಶ್ ನಾಯ್ಕ್ ಕಿವಿ ಮಾತು ಹೇಳಿದರು.
ಸಭೆಯಲ್ಲಿ ತಾ.ಪಂ. ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲೀ, ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಮಾಜಿ ತಾ.ಪಂ. ಸದಸ್ಯ ರತ್ನಕುಮಾರ್ ಚೌಟ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪಂಚಾಯತಿ ಸದಸ್ಯರಾದ ಮಾದವ ಶೆಟ್ಟಿಗಾರ್, ಎಸ್.ಪಿ.ಶ್ರೀದರ್, ಸುರೇಶ್ ಕುಲಾಲ್, ಮಯ್ಯೆದ್ದಿ, ದೇವಪ್ಪ ಕರ್ಕೇರ, ವಿಮಲ ಮೋಹನ್, ಉಷಾ, ಸುಲೋಚನ, ನಳಿನಿ, ಪದ್ಮಲತಾ, ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಮೇನೆಜರ್ ಆರತಿ ಶೆಟ್ಟಿ, ಪ್ರಮುಖರಾದ ಉಮೇಶ್ ಗೌಡ ಮಂಚಕಲ್ಲು, ಟಾಸ್ಕ್ ಪೊರ್ಸ್ ಸಮಿತಿಯ ವಿವಿಧ ಇಲಾಖೆಯ ಪಂಚಾಯತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಧರ್ಮರಾಜ್ ಸ್ವಾಗತಿಸಿ, ವಂದಿಸಿದರು.

More from the blog

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...

Rain Alert : ರಾಜ್ಯದಲ್ಲಿ ಮುಂಗಾರು ಚುರುಕು – ಕರಾವಳಿ ಸೇರಿ ಹಲವೆಡೆ 3 ದಿನ ಭಾರೀ ಮಳೆ ಸಾಧ್ಯತೆ..

ಮಂಗಳೂರು : ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಸೇರಿ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಆರಂಭವಾಗಿ 15 ದಿನಗಳು ಕಳೆದರೂ...

ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ

ಬಂಟ್ವಾಳ : ಕವಿ‌, ಸಾಹಿತಿ, ಸಂಘಟಕ ಯುವವಾಹಿನಿಯ ಸಲಹೆಗಾರ ಬಿ ತಮ್ಮಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ ಆಯೋಜಿಸಲಾತ್ತು. ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹೊಸಪೇಟೆ , ವಿಜಯನಗರ, ಬೆಂಗಳೂರು, ಚಿತ್ರದುರ್ಗ,...

ಗಿಡಗಳ ಸಂರಕ್ಷಣೆಗೆ ಸಾಮೂಹಿಕ ಜಾಗೃತಿ ಅಗತ್ಯ- ರಾಜೇಶ್ ಬಿ

ಮಂಗಳೂರು : ಗಿಡಗಳ ಸಂರಕ್ಷಣೆಯ ಬಗ್ಗೆ ಸಾಮೂಹಿಕ ಜಾಗೃತಿ ಅಗತ್ಯ ವಿದೆ ಎಂದು ಮಂಗಳೂರು ವಲಯ ಅರಣ್ಯ ಅಧಿಕಾರಿ ರಾಜೇಶ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ...