ಬಂಟ್ವಾಳ : ಪಲ್ಘುಣಿ ನದಿಗೆ ಅಡ್ದಲಾಗಿ ಪಶ್ಚಿಮ ವಾಹಿಣಿ ಯೋಜನೆ ಯಡಿಯಲ್ಲಿ ಬಂಟ್ವಾಳ -ಮಂಗಳೂರು ಸಂಪರ್ಕ ಸೇರಿದಂತೆ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಎಂಬಲ್ಲಿನ ರೂ.48 ಕೋಟಿ ” ಅನುದಾನ ವೆಚ್ಚದ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿಯನ್ನು ಮಳೆಗಾಲ ಪ್ರಾರಂಭ ಮುಂಚೆಯೇ ಬಹುತೇಕ ಪೂರ್ಣಗೋಳಿಸಲು ಸಣ್ಣ ನೀರಾವರಿಯ ಇಂಜಿನಿಯರ್ ಗಳಿಗೆ ಮತ್ತು ಸಂಬಂಧಿಸಿದ ವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸೂಚನೆ ನೀಡಿದರು.


ಕೊರೊನಾ ಹತೋಟಿ ಬಗ್ಗೆ ಸಂಗಬೆಟ್ಟು ಗ್ರಾಮಪಂಚಾಯತ್ ಭೇಟಿ ನೀಡಿ ಪಂಚಾಯತ್ ಮಟ್ಟದ ಟಾಸ್ಕ್ ಪೊರ್ಸ್ ಸಮಿತಿಯು ಕೈಗೊಂಡ ಅಗತ್ಯಕ್ರಮಗಳ ಪರಿಶೀಲನೆ ಸಂದರ್ಭದಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಅಣೆಕಟ್ಟು ಕಾಮಗಾರಿ ವಿಳಂಬ ಹಾಗೂ ಕೂಲಿಕಾರ್ಮಿಕರ ಸ್ಥಿತಿಯನ್ನು ಅವಲೋಕಿಸಲು ಶಾಸಕರು ದಿಡೀರನೆ ಅಣೆಕಟ್ಟು ಕಾಮಗಾರಿ ಇಂದು ವಿಕ್ಷಿಸಿ ಅಧಿಕಾರಿ ಗಳಿಗೆ ಸಲಹೆ ಸೂಚನೆ ನೀಡಿದರು.
ಕಾಮಗಾರಿಗೆ ಈ ಹಿಂದೆ ಮಂಜೂರು ಗೊಂಡ 16 ಕೋಟಿ ಅನುದಾನವನ್ನು ಊರವರ ಬೇಡಿಕೆಯ ಹಿನ್ನೆಲೆಯಲ್ಲಿ 32 ಕೋಟಿಗೆ ಹೆಚ್ಚಿಸ್ಸಿ ಸೇತುವೆ ಅಗಲೀಕರಣ ಮತ್ತು ಘನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ ಅಣೆಕಟ್ಟು ಇಕ್ಕೆಲಗಳಲ್ಲಿನ ರೈತರ ಬೇಡಿಕೆ ಮೇರೆಗೆ ಎರಡು ಬದಿಗಳೆಲ್ಲಿ ಸುಮಾರು 20 ಕೀ.ಮೀ ಉದ್ದಕ್ಕೆ ಕೃಷಿ ಭೂಮಿಗೆ ನೀರು ಹಾದು ಹೋಗಲು 12 ಕೋಟಿ ಅನುದಾನ ಮತ್ತೆ ಮಂಜೂರು ಗೋಳಿಸಲಾಗಿದ್ದು ಒಟ್ಟು 42 ಕೋಟಿ ವೆಚ್ಚದ ಈ ಕಾಮಗಾರಿ ತುರ್ತು ಮುಗಿಸುವ ದೃಷ್ಟಿಯಿಂದ ಅಳಮಟ್ಟಿ ಅಣೆಕಟ್ಟು ನಿರ್ಮಾಣ ತಜ್ಞರುನ್ನು ತರಿಸಲು ಸರ್ಕಾರದ ವತಿಯಿಂದ ಕ್ರಮಕೈಗೊಳ್ಳುವುದಾಗಿ ಶಾಸಕ ರಾಜೇಶ್ ನಾಯ್ಕ್,ಈ ಸಂದರ್ಭದಲ್ಲಿ ತಿಳಿಸಿದರು.
.
ಈ ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದಲ್ಲಿ ನೀರಿನ ಸಮಸ್ಯೆ ಕೊಂಚ ಸುದಾರಿಸಲಿದ್ದು, ಬೆಳ್ತಂಗಡಿ ತಾಲೂಕಿನ ವೇಣೂರು, ಕಡೆಯಿಂದ ಬಂಟ್ವಾಳದ ವಾಮದಪದವು ಸಿದ್ದಕಟ್ಟೆ ಮುಂತಾದ ಪ್ರದೇಶದ ಜನರಿಗೆ ಮಂಗಳೂರು ಸಂಪರ್ಕ.ಸುಗಮವಾಗಲಿದ್ದು,
ಮಂಗಳೂರು ತಾಲೂಕಿನ ಕುಪ್ಪೆಪದವು, ಎಡಪದವು ಸೇರಿದಂತೆ ಬಹುತೇಕ ಜನರಿಗೆ ಈ ರಸ್ತೆಯ ಮೂಲಕ ಬಂಟ್ವಾಳ ಹಾಗೂ ಧರ್ಮಸ್ಥಳ ಉಜಿರೆ ತುಂಬಾ ಹತ್ತೀರವಾಗಲಿದೆ. ಅದರಲ್ಲೂ ಮಂಗಳೂರು ವಿಮಾನ ನಿಲ್ದಾಣವು ಬಹಳ ಹತ್ತಿರವಾಗಲಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಸ್ವಲ್ಪ ಕಾಮಗಾರಿ ವಿಳಂಬವಾಗಿದ್ದು, ಇನ್ನೂ ಮುಂದೆ ಹೊರಗಿನ ಹೊಸ ಕಾರ್ಮಿಕರನ್ನು ಸೇರಿಸದೆ ಕಾರ್ಮಿಕರನ್ನು ಹೊರಗೆ ಹೊಗದಂತೆ ನೋಡಿ ಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮಳೆಗಾಲ ಮುಂಚೆಯೀ ಕಾಮಗಾರಿ ಮುಕ್ತಾಯ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ರಾಜೇಶ್ ನಾಯ್ಕ್ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣ ಕುಮಾರ್, ಸಹಾಯಕ ಇಂಜಿನಿಯರ್ ಪ್ರಸನ್ನ, ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಗುತ್ತಿಗೆದಾರರ ಇಂಜಿನಿಯರ್ ಪ್ರೀನ್ಸ್,ಸೈಟ್, ಮೆನೆಜರ್ ಮಂಜುನಾಥ್, ಪ್ರಮುಖರಾದ ಗಣೀಶ್ ರೈ ಮಾಣಿ, ಶಾಸಕರ ಅಪ್ತ ಸಹಾಯಕರಾದ ದಿನೇಶ್, ಪವನ್ ಕುಮಾರ್, ಗ್ರಾಮದ ಪ್ರಮುಖರಾದ ತೇಜಾಸ್ ಮರ್ದೊಟ್ಟು, ನವೀನ ಪೂಜಾರಿ ಹೊಸಹೊಕ್ಲು ಇನ್ನೀತರರು ಉಪಸ್ಥಿತರಿದ್ದರು.












