ಬಂಟ್ವಾಳ: ಕೊರೊನಾ ಲಾಕ್ ಡೌನ್ ನಿಂದ ಕಂಗೆಟ್ಟಿರುವ ಬಂಟ್ವಾಳ ತಾಲೂಕಿನ ಛಾಯಾಗ್ರಾಹಕರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ಹಾಗೂ ಟ್ರಸ್ಟ್ ನ ವತಿಯಿಂದ ಸುಮಾರು 150 ಮಂದಿ ಸದಸ್ಯರಿಗೆ 1 ಲಕ್ಷ ರೂ.ಮೌಲ್ಯದ ದಿನ ಬಳಕೆಯ ಆಹಾರದ ಕಿಟ್ ನ್ನು ನೀಡಲಾಯಿತು.


ಲಾಕ್ ಡೌನ್ ನಿಂದಾಗಿ ಛಾಯಾಗ್ರಾಹಕರ ಸೀಸನ್ ತಿಂಗಳಾಗಿರುವ ಎಪ್ರಿಲ್ ಮತ್ತು ಮೇ ಯಲ್ಲಿ ಮುಂಗಡ ಕಾಯ್ದಿರಿಸಿದ ಮದುವೆ ಕಾರ್ಯಕ್ರಮಗಳು ಎಲ್ಲವೂ ರದ್ದುಗೊಂಡಿದೆ. ಹೀಗಾಗಿ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ.
ಈ ಸಂದರ್ಭದಲ್ಲಿ ವಲಯ ಛಾಯಾಗ್ರಾಹಕರ ಸಂಘದ ವಲಯ ಅಧ್ಯಕ್ಷ ಕುಮಾರಸ್ವಾಮಿ ಕನ್ಯಾನ, ಕಾರ್ಯದರ್ಶಿ ವಿಕೇಶ್ ಬಂಟ್ವಾಳ, ಛಾಯಾಕ್ಷೇಮ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಆನಂದ ಎನ್. ಹಾಗೂ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

