Friday, July 11, 2025

ಮಾ.14, 15: ಬಂಟ್ವಾಳ ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳ ತಾಲೂಕಿನ ವಿಧಾನಸಭಾ ಕ್ಷೇತ್ರದ ಮಳೆಹಾನಿ ಯೋಜನೆಯಲ್ಲಿ ಕ್ಷೇತ್ರದ ವಿವಿಧ ರಸ್ತೆಗಳ ಮರು ಡಾಮರೀಕರಣ ಕಾಮಗಾರಿಗಳಿಗೆ 14 ಕೋಟಿ 79 ಲಕ್ಷ ಅನುದಾನ ಮಂಜೂರು ಆಗಿರುತ್ತದೆ. ಈ ಕೆಳಗಿನ ಕಾಮಗಾರಿಗಳಿಗೆ ಮಾ.14 ಶನಿವಾರ ಮತ್ತು ಮಾ.15 ಆದಿತ್ಯವಾರದಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರೆವೇರಿಸಲಿದ್ದಾರೆ.
ಮಾ.14 ಶನಿವಾರದಂದು ಬೆಳಿಗ್ಗೆ ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ ಶಿಲಾನ್ಯಾಸ (86 ಲಕ್ಷ), ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು-ಕಳ್ಳಿಗೆ ರಸ್ತೆ ಶಿಲಾನ್ಯಾಸ (80 ಲಕ್ಷ), ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ದಾಸಕೋಡಿ ರಸ್ತೆ ಶಿಲಾನ್ಯಾಸ (1.50 ಕೋಟಿ), ಅನಂತಾಡಿ ಗ್ರಾಮದ ಅನಂತಾಡಿ-ಕೊಂಬಿಲ ರಸ್ತೆ ಶಿಲಾನ್ಯಾಸ (1.50 ಕೋಟಿ), ಮಧ್ಯಾಹ್ನ ನಾವೂರು, ಸರಪಾಡಿ ಗ್ರಾಮದ ಮಣಿಹಳ್ಳ-ಅಲ್ಲಿಪಾದೆ-ಅಜಿಲಮೊಗರು ರಸ್ತೆ ಶಿಲಾನ್ಯಾಸ (1.70 ಕೋಟಿ), ಸರಪಾಡಿ ಗ್ರಾಮದ ಕುಂಟಾಲಪಲ್ಕೆ ರಸ್ತೆ ಶಿಲಾನ್ಯಾಸ (98 ಲಕ್ಷ), ಮಣಿನಾಲ್ಕೂರು ಗ್ರಾಮದ ಗಂಡಿ ಕೊಟ್ಟಿಂಜ ರಸ್ತೆ ಶಿಲಾನ್ಯಾಸ (65 ಲಕ್ಷ), ಬಡಗಕಜೆಕಾರು ಗ್ರಾಮದ ನರ್ಸಿರಕುಮೇರು-ಪಾಂಡವರಕಲ್ಲು ರಸ್ತೆ ಶಿಲಾನ್ಯಾಸ (1.35 ಕೋಟಿ) ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ

ಮಾ.15 ಆದಿತ್ಯವಾರ ಬೆಳಿಗ್ಗೆ ಕರೋಪಾಡಿ ಗ್ರಾಮದ ಒಡಿಯೂರು ಪಲ್ಲದಕೋಡಿ ಪದ್ಯಾಣ ರಸ್ತೆ ಶಿಲಾನ್ಯಾಸ (2.25 ಕೋಟಿ), ಮಧ್ಯಾಹ್ನ ಕರೋಪಾಡಿ ಗ್ರಾಮದ ಅರಸೋಳಿಗೆ ರಸ್ತೆ ಶಿಲಾನ್ಯಾಸ (60 ಲಕ್ಷ), ಕೊಳ್ನಾಡು ಗ್ರಾಮದ ಕುಳಾಲು ರಸ್ತೆ ಶಿಲಾನ್ಯಾಸ ((2.50 ಕೋಟಿ) ಶಿಲಾನ್ಯಾಸ ಮಾಡಲಿದ್ದಾರೆ.

More from the blog

ರಾಷ್ಟ್ರ, ಧರ್ಮಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದೇ ನಿಜವಾದ ಗುರುದಕ್ಷಿಣೆ – ಮಂಜುಳಾ ಗೌಡ

ಬಂಟ್ವಾಳ : ಪ್ರಸ್ತುತ ಹಿಂದೂ ಧರ್ಮದ ಮೇಲಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹಿಂದೂಗಳ ಸಂಘಟನೆ ಆವಶ್ಯಕತೆಯಿದೆ. ಆದರೆ ‘ಸಾಧನೆ ಮತ್ತು ಧರ್ಮ' ಇದು ಸಂಘಟನೆಯ ಅಡಿಪಾಯವಾಗಿದ್ದರೆ ಮಾತ್ರ ರಾಷ್ಟ್ರ-ಧರ್ಮ ಕಾರ್ಯದ ಕಟ್ಟಡ ಭದ್ರವಾಗಿರಲು ಸಾಧ್ಯ....

ಬಂಟ್ವಾಳ ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ಉಮೇಶ್ ಗೌಡ ಮಾಡತ್ತೇಲು ಆಯ್ಕೆ

ಬಂಟ್ವಾಳ : ತುಳುನಾಡಿನ ಅಸ್ಮಿತೆಯ ಚಳುವಳಿಯಾಗಿ ಗುರುತಿಸಲ್ಪಟ್ಟ ತುಳುವ ಮಹಾಸಭೆ ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಇಂತಹ ನಿರ್ಣಾಯಕ ಸಮಯದಲ್ಲಿ, ಬಂಟ್ವಾಳ ತಾಲೂಕು ಘಟಕದ ಸಂಚಾಲಕರಾಗಿ ಸಮಾಜ ಶಾಸ್ತ್ರದಲ್ಲಿ...

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ : ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ..

ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ...

ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ.. 

ಬಂಟ್ವಾಳ : ಜೀವನದಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು. ಮಗುವಿನ ನೋವು ನಲಿವಿನಲ್ಲಿ ಮಾತ್ರವಲ್ಲದೆ ಸಂಸ್ಕಾರಯುತ ಶಿಕ್ಷಣ ಹೊಂದುವಲ್ಲೂ ತಾಯಿ ಮಗುವಿನ ಪ್ರತಿ ಹಂತದಲ್ಲೂ ಜೊತೆಯಾಗಿರಬೇಕು, ಸಂಸ್ಕಾರಯುತ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುವಲ್ಲಿ ತಾಯಿಯೇ...