Monday, January 26, 2026

ಶಂಭೂರು-ಮಂಜನಕೋಡಿ ರಸ್ತೆ ಅಭಿವೃಧ್ಧಿಗೆ ಶಾಸಕರ ಅನುದಾನ

ಬಂಟ್ವಾಳ: ಶಂಭೂರು-ಮಂಜನಕೋಡಿ ರಸ್ತೆಗೆ ಶಾಸಕರ ಅನುದಾನದಿಂದ ಮಂಜೂರಾದ ರೂ.5 ಲಕ್ಷ ಕಾಮಾಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುದ್ದಲಿ ಪೂಜೆ ಮಾಡಿದರು.
ಈ ಸಂಧರ್ಭದಲ್ಲಿ ಜಿ.ಪಂ. ಸದಸ್ಯೆ ಕಮಾಲಾಕ್ಷಿ ಕೆ.ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪಂಚಾಯತ್ ಸದಸ್ಯರಾದ ದಿವಾಕರ ಶಂಭೂರು, ಉದಯ ರಾಜ್, ಹೇಮಾಲತಾ ಕೆ., ಜಯಾರಾಜ್ ಕೆ., ಕಿಶೋರ್ ಶೆಟ್ಟಿ, ಕಿರಿಯ ಅಭಿಯಂತರಾದ ಕುಶು ಕುಮಾರ್, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶಿವ, ಗಣ್ಯರಾದ ಭೋಜರಾಜ್ ಕೆ., ಕಮಾಲಾಕ್ಷ ಎಸ್., ಮಾಧವ ಪಿ., ಪ್ರೇಮನಾಥ ಶೆಟ್ಟಿ ಅಂತರ, ಪಂಚಾಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಟೈಲರ್, ಬೂತ್ ಸಮಿತಿ ಅಧ್ಯಕ್ಷರಾದ ಯೋಗೀಶ್, ಸಂತೋಷ್, ಗುತ್ತಿಗೆದಾರರಾದ ನಾಗೇಶ್ ನಾಲ, ಸಂದೇಶ್ ಉಪಸ್ಥಿತರಿದ್ದರು. ತಾ.ಪ.ಮಾಜಿ ಉಪಧ್ಯಕ್ಷ ಆನಂದ ಎ. ಶಂಭೂರು ಸ್ವಾಗತಿಸಿದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...