Friday, June 27, 2025

ಬೇಡಿಕೆಗಳಿಗೆ ಮತ್ತು ಸಮಸ್ಯೆ ಗಳ ಪರಿಹಾರಕ್ಕಾಗಿ ಗ್ರಾಮ ಸ್ಪಂದನ ಕಾರ್ಯಕ್ರಮ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ನಾನು ನಿಮ್ಮ ಧ್ವನಿ ಯಾಗಿದ್ದೇನೆ , ಕಷ್ಟಗಳಿಗೆ ಸ್ಷಂದನೆ ನೀಡುತೇನೆ, ನಿಮ್ಮ ಸಲಹೆ ಮತ್ತು ಬೇಡಿಕೆಗಳಿಗೆ ಸದಾ ಜೊತೆಗಿರುತ್ತೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಅವರು ಜೂ. 28 ರಂದು ಅಮ್ಟಾಡಿ ಗ್ರಾ.ಪಂ.ನಲ್ಲಿ ” ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮ ದಲ್ಲಿ ಮಾತನಾಡಿದ ದರು.

1ಕೋಟಿ 20 ಲಕ್ಷ ಅನುದಾನ ಈ ಗ್ರಾ.ಪಂ.ಗೆ ಬಂದಿದ್ದು ಕಾಮಗಾರಿಗಳು ನಡೆಯುತ್ತಿವೆ.
ಉಳಿದಂತೆ ಗ್ರಾಮದ ಜನರಲ್ಲಿ ಇರುವ ಬೇಡಿಕೆಗಳಿಗೆ ಮತ್ತು ಸಮಸ್ಯೆ ಗಳ ಪರಿಹಾರಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ.
ಸರಕಾರದ ಯೋಜನೆ ಪ್ರತಿಯೋಬ್ಬರಿಗೂ ತಲುಪಬೇಕು ಮತ್ತು ಜನರಿಗೆ ಯೋಜನೆಗಳ ಮಾಹಿತಿ ಸಿಗಬೇಕು ಎಂದು ಒತ್ತುನೀಡಿ ಅಧಿಕಾರಿಗಳ ಜೊತೆ ನಿಮ್ಮ ಬಳಿ ಬಂದಿದ್ದೇನೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪಂ.ಅನುದಾನದಲ್ಲಿ ಕುರಿಯಾಳ ಕುಟಿಲ ನಿವಾಸಿ ವಿಕಲಾಂಗೆ ಭವಾನಿ ಅವರಿಗೆ ವೀಲ್ ಚೇರ್ ನ್ನು ಶಾಸಕರು ನೀಡಿದರು.

ಕಾರ್ಯಕ್ರಮಕ್ಕೆ ಅಗಮಿಸಿದ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದ ಅವರು ಕೆಲವೊಂದು ಸಮಸ್ಯೆ ಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು.

ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ನಡೆಸಿದ ಬಳಿಕ ರಸ್ತೆಗಳ ಉದ್ಘಾಟನೆ ನಡೆಸಲಾಯಿತು.ಕಾರ್ಯಕ್ರಮ ದ ಬಳಿಕ ಅಧಿಕಾಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.ಸಮಸ್ಯೆ ಗಳಿಗೆ ಶೀಘ್ರವಾಗಿ ಮುಕ್ತಿ ನೀಡುವಂತೆ ತಿಳಿಸಿದರು. ‌
ಸ್ವಚ್ಚಗೆ ಆದ್ಯತೆ ನೀಡಿ, ‌ಬಹಳ ಪ್ರಮುಖವಾಗಿ ಬರುವ ವರ್ಷದಿಂದ ಕುಡಿಯುವ ನೀರಿನ‌ ಸಮಸ್ಯೆ ಉಂಟಾಗದಂತೆ ಬೇಕಾದ ಕ್ರಮಗಳನ್ನು ನಾವು ಮಾಡಬೇಕಾಗಿದೆ. ಪ್ರತಿ ಗ್ರಾ.ಪಂ.ನವರು ಈ ಕಾರ್ಯಕ್ರಮ ಕ್ಕೆ ಕೈಜೋಡಿಸಬೇಕು ಎಂದರು.

ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ತಾ.ಪಂ.ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ ಉಪಾಧ್ಯಕ್ಷ ಯಶೋಧ, ಗ್ರಾ.ಪಂ.ಸದಸ್ಯ ರಾದ ಶೇಖರ್ ಶೆಟ್ಟಿ, ಬಬಿತಾ ಕೋಟ್ಯಾನ್, ಚೇತನಾ, ಪೂರ್ಣಿಮಾ, ಶ್ರೀಮತಿ ಶೆಟ್ಟಿ, ಐರಿನ್ ಡಿಸೋಜ, ಮೋಹಿನಿ, ವಿಶ್ವನಾಥ, ದೇವದಾಸ್, ಚಂದ್ರಾವತಿ ನಾಯ್ಕ, ಸುನಿಲ್ ಕೆ., ಸುರೇಂದ್ರ, ಸುಧಾಕರ ಶೆಟ್ಟಿ, ರತಿ ಭಂಡಾರಿ,

ಪಿ.ಡಿ.ಒ. ಮಹಮ್ಮದ್ ಬಿ.ಕಂದಾಯ ಅಧಿಕಾರಿ ನವೀನ್ ,ಗ್ರಾಮ ಕರಣೀಕ ರಾದ ಶಶಿ ಕುಮಾರ್, ಅಮೃತಾಂಶಿ, ಸಿ.ಡಿ.ಪಿ.ಒ.ಗಾಯತ್ರಿ ಬಾಯಿ , ಪಂ.ಕಾರ್ಯದರ್ಶಿ ಲಕ್ಮೀನಾರಾಯಣ ಕೆ.

ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ರಾಮ್ ದಾಸ ಬಂಟ್ವಾಳ,ಶ್ರೀ ಕಾಂತ ಶೆಟ್ಟಿ ಸಜೀಪ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ ವಾಮದಪದವು, ನಂದರಾಮ್ ರೈ, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಗಣೇಶ್ ರೈ ಮಾಣಿ, ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು.
ಪಿ.ಡಿಒ ಮಹಮ್ಮದ್ ವಂದಿಸಿ , ಕಾರ್ಯಕ್ರಮ ನಿರೂಪಿಸಿದರು

 

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...