ಬಂಟ್ವಾಳ: ಇತ್ತೀಚೆಗೆ ವಾಮದಪದವು ಬಾರೆಕ್ಕಿನಡೆಯಲ್ಲಿ ವಿದ್ಯುತ್ ದುರಂತಕ್ಕೆ ಬಲಿಯಾದ ದಿ.ಗೋಪಾಲ ಶೆಟ್ಟಿ ಮತ್ತು ದಿ.ದಿವ್ಯ ಶ್ರೀಯವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಮೆಸ್ಕಾಂನ ಮೇಲಾಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ,ನಂದರಾಮ ರೈ,ಗಣೇಶ್ ರೈ ಮಾಣಿ ,ಗೋಪಾಲಕೃಷ್ಣ ಚೌಟ,ಪುರುಷೋತ್ತಮ ಶೆಟ್ಟಿ ವಾಮದಪದವು,ದಿನೇಶ್ ದಂಬೆದಾರು,ವಿಜಯ ರೈ ಆಲದಪದವು,ರವಿರಾಮ,ಸಂತೋಷ್ ಜೈನ್,ಪ್ರಕಾಶ್ ಕಕ್ಕಿಬೆಟ್ಟು,ಚಂದ್ರಶೇಖರ್ ಶೆಟ್ಟಿ ,ಚೇತನ್,ಜಗದೀಶ್ ಉಪಸ್ಥಿತರಿದ್ದರು.
