Sunday, January 25, 2026

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ: ಶಾಸಕ‌ ರಾಜೇಶ್ ನಾಯ್ಕ್

ಬಂಟ್ವಾಳ : ನರಿಕೊಂಬು , ಬಾಳ್ತಿಲ ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್-19 ತಡೆಗಾಗಿ ರಚನೆಗೊಂಡ ಟಾಸ್ಕ್ ಫೋರ್ಸ್ ಸದಸ್ಯರ ವಿಶೇಷ ಸಭೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ನಡೆಯಿತು.

ಸಂಕಷ್ಟದಲ್ಲಿರುವ ಜನತೆಗೆ ಮಾನವೀಯ ನೆಲೆಯಲ್ಲಿ ಸ್ಪಂಧಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಾಗಿದೆ ಎಂದು ಶಾಸಕ ಸೂಚಿಸಿದರು.
ಸಾರ್ವಜನಿಕ ರಿಗೆ ಹೋಂ ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ಯನ್ನು ಸಮಿತಿ ಅಧಿಕಾರಿಗಳು ನೀಡಬೇಕು.
ಕೋವಿಡ್ ಲಾಕ್ ಡೌನ ಈ ಅವಧಿಯಲ್ಲಿ
ಸಾರ್ವಜನಿಕರು ದಿನಬಳಕೆಯ ವಸ್ತಗಳಿಗಾಗಿ ಪ್ರತಿದಿನ ಮನೆಯಿಂದ ಹೊರಗೆ ಬರುವಂತಹ ಪರಿಪಾಠ ಬೆಳೆಸಿಕೊಳ್ಳುವುದು ಅಷ್ಟು ಸಮಂಜಸ ವಲ್ಲ, ವಾರಕ್ಕೆ ಒಮ್ಮೆ ಗೆ ಬೇಕಾಗುವಷ್ಟು ಸಾಮಾಗ್ರಿಗಳನ್ನು ದಾಸ್ತಾನು ಮಾಡುವಂತೆ ಸಲಹೆ ನೀಡಿದರು.
ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುವ ಉದ್ದೇಶದಿಂದ ಸುತ್ತಾಡಿ ಬರುವುದು ಉತ್ತಮ ಬೆಳವಣಿಗೆಯ ಲ್ಲ.
ಲಾಕ್ ಡೌನ್ ಅಥವಾ ಕೊರೊನಾ ವೈರಸ್ ಸಂಪೂರ್ಣ ವಾಗಿ ತಡೆಗಟ್ಟಲು ಎಷ್ಟು ಅವಧಿ ಬೇಕು ಎಂಬ ಸ್ಪಷ್ಟವಾದ ಕಲ್ಪನೆ ಯಾರಿಗೂ ಇಲ್ಲ, ಹಾಗಾಗಿ ಪ್ರಸ್ತುತ ನಾವು ಅತ್ಯಂತ ಜಾಗರೂಕತೆಯಿಂದ ಅಗತ್ಯವಸ್ತುಗಳನ್ನು ಸಂದರ್ಭೋಚಿತ ವಾಗಿ ಬಳಕೆ ಮಾಡಲು ಅಭ್ಯಾಸ ಮಾಡುವ ಅಗತ್ಯ ವಿದೆ, ಸರಕಾರ ಅಥವಾ ಸಂಘಸಂಸ್ಥೆಗಳು ನೀಡುವ ದಿನಬಳಕೆಯ ವಸ್ತುಗಳ ಬಳಕೆಯಲ್ಲಿ ದುಂದುವೆಚ್ಚಬೇಡ ಎಂಬ ಕಿವಿಮಾತನ್ನು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸುವ ಅಗತ್ಯ ವಿದೆ ಎಂದು ಅವರು ಹೇಳಿದರು.
ಕಾರಣಾಂತರಗಳಿಂದ ಗ್ರಾಮ ಮಟ್ಟದಲ್ಲಿ ಬಿ.ಪಿ.ಎಲ್.ವಂಚಿತ ಕುಟುಂಬಗಳಿದ್ದರೆ ಅಂತವರ ಗುರುತಿಸಿ ಪಟ್ಟಿ ಕೊಡಿ ಅವರಿಗೆ ರೇಷನ್ ನೀಡುವ ಕೆಲಸ ಮಾಡುವ ಭರವಸೆ ನೀಡಿದರು.
ಜೊತೆಗೆ ಅರ್ಹ ವ್ಯಕ್ತಿಗಳು ಸಾಮಾಜಿಕ ಪಿಂಚಣಿಯಿಂದ ವಂಚಿತರಾಗಿದ್ದರೆ ಅಂತವರನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಿ ಅವರಿಗೂ ನೆರವು ನೀಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಕಲ್ಲಡ್ಕ ಕೆಲವು ದಿನಸಿ ಅಂಗಡಿಗಳಲ್ಲಿ ನಿಗಧಿತ ದರಕ್ಕಿಂತ ಹೆಚ್ಚು ದರವನ್ನು ಸಾಮಾಗ್ರಿಗಳಿಗೆ ಬಳಕೆದಾರರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ದೂರನ್ನು ಗೋಳ್ತಮಜಲು ಗ್ರಾ.ಪಂ.ನಲ್ಲಿ ನಡೆದ ಸಭೆಯಲ್ಲಿ ಟಾಸ್ಕಪೋರ್ಸ್ ಸಮಿತಿ ಅಧಿಕಾರಿಗಳು ಶಾಸಕರಲ್ಲಿ ಹೇಳಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ದುಪ್ಪಟ್ಟು ದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡುತ್ತೇನೆ.
ಗ್ರಾ.ಪಂ.ಪಿ.ಡಿ.ಒ.ಗಳಿಗೆ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಅಧಿಕಾರ ವಿರುವುದರಿಂದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಲ್ಲಿ ದರಪಟ್ಟಿ ನಮೂದಿಸಿ ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ತಾ.ಪಂ.ಇ.ಒ.ರಾಜಣ್ಣ, ಟಾಸ್ಕ್ ಫೋರ್ಸ್‌ ಸಮಿತಿ ಯ ಅಧಿಕಾರಿಗಳು ಹಾಗೂ ಗ್ರಾ.ಪಂ.ಪಿ.ಡಿ.ಒ.ಗಳು, ಗ್ರಾಮಕರಣೀಕರುಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿರು ಉಪಸ್ಥಿತರಿದ್ದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...