ಕೊರೊನಾ ವೈರಸ್ ನ ಭೀತಿಯಿಂದ ಜಗತ್ತಿನ ಎಲ್ಲಡೆ ಜನಜೀವನ ಅಸ್ತವ್ಯಸ್ತತೆಗೊಂಡಿದೆ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ಜನತೆಗೆ ಯಾವುದೇ ತೊಂದರೆ ಯಾಗದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವಿವಿಧ ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಕಾರ್ಯಗಳನ್ನು ಲಾಕ್ ಡೌನ ಬಳಿಕ ಮಾಡುತ್ತಾ ಬಂದಿದ್ದಾರೆ.
ಎರಡು ದಿನಗಳ ಹಿಂದೆ ಬಂಟ್ವಾಳ ಪುರಸಭೆ ಯ ಎಲ್ಲಾ ಪೌರಕಾರ್ಮಿಕರಿಗೆ ಅಕ್ಕಿ ಹಾಗೂ ನಗದು ಹಣ ನೀಡಿದ್ದರು. ಬಳಿಕ ಅವರ ಆರೋಗ್ಯ ದ ದೃಷ್ಟಿಯಿಂದ ಆರೋಗ್ಯ ತಪಾಸಣೆ ಕೂಡ ಮಾಡಿಸಿದ್ದರು.
ಪ್ರಸ್ತುತ ಕ್ಲಿಸ್ಟಕರವಾದ ಪರಿಸ್ಥಿತಿಯಲ್ಲಿ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುವ
ಬಂಟ್ವಾಳ ತಾಲೂಕಿನ 351 ಆಶಾ ಕಾರ್ಯಕರ್ತೆ ಯರಿಗೂ ಇದೇ ಮಾದರಿಯಲ್ಲಿ ನೆರವು ನೀಡಿದರು.
ಜೊತೆಗೆ ಬಂಟ್ವಾಳ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಪಟ್ಟಿ ಸಿದ್ದವಾಗಿದ್ದು ಅವರಿಗೂ ಈ ಯೋಜನೆ ಯನ್ನು ನೀಡುವ ಯೋಚನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮ ಗ್ರಾಮದಲ್ಲಿ ಶಾಸಕರ ಯುವ ತಂಡ ಗಳು ಕೊರೊನಾ ಲಾಕ್ ಡೌನ್ ಅದ ಹಿನ್ನೆಲೆಯಲ್ಲಿ ಸಮಸ್ಯೆ ಯಲ್ಲಿರುವ ಪ್ರತಿ ಕುಟುಂಬಗಳಿಗೆ ವೈದ್ಯಕೀಯ, ಸಹಿತ ಎಲ್ಲಾ ನೆರವನ್ನು ನೀಡಲು ನಿರಂತರವಾಗಿ ದಿನದ 24 ಗಂಟೆಯೂ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ 351 ಆಶಾ ಕಾರ್ಯಕರ್ತೆಯರಿಗೆ ತಲಾ ೨೫ ಕೆ.ಜಿ. ಅಕ್ಕಿ ವಿತರಣೆ ನಿರ್ಧರಿಸಿದ್ದು, ಶನಿವಾರ ಅಕ್ಕಿ ವಿತರಣೆಗೆ ಚಾಲನೆ ನೀಡಲಾಯಿತು.
ಶನಿವಾರ ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ ಅವರ ನೇತೃತ್ವದಲ್ಲಿ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೧೧, ವಾಮದಪದವುನಲ್ಲಿ ೧೧, ಪುಂಜಾಲಕಟ್ಟೆಯಲ್ಲಿ ೨೨, ದೈವಸ್ಥಳ ೧೫, ನಾವೂರ ೬, ಪಂಜಿಕಲ್ಲು ೧೩ ಸೇರಿ ಒಟ್ಟು ೭೮ ಮಂದಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಿತರಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಅಕ್ಕಿ ವಿತರಣೆಯ ಸಂಧರ್ಭದಲ್ಲಿ ದೇವದಾಸ್ ಶೆಟ್ಟಿಯವರ ಜತೆ ಸ್ಥಳೀಯರಾದ ದಯಾನಂದ ಸಪಲ್ಯ, ಹರೀಶ್ ಆಚಾರ್ಯ, ಪರಮೇಶ್ವರ ಪೂಜಾರಿ, ಸಂತೋಷ್ ಕುಮಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ದಂಬೆ,ಸಂತೋಷ್ ಜೈನ್, ಶ್ರೇಯಸ್, ಪ್ರಭಾಕರ ಶೆಟ್ಟಿ, ಪ್ರಣಾಥ್, ಡಾ.ಉಮೇಶ್ ಅಡ್ಯಂತಾಯ, ರಾಮಕೃಷ್ಣ ಮಯ್ಯ, ಚಿದಾನಂದ ರೈ, ಪ್ರಕಾಶ್ ಅಂಚನ್, ಚಿದಾನಂದ ಕುಲಾಲ್, ಕೇಶವ,ಮೋಹನ್ ದಾಸ್, ಕೇಶವ ಲೂಜಂತೋಡಿ ಮುಂತಾದವರು ಉಪಸ್ಥಿತರಿದ್ದರು.

