ಬಂಟ್ವಾಳ: ಬಂಟ್ವಾಳ ತಾಲೂಕು ನಯನಾಡು ಗ್ರಾಮದ ಮಿತ್ತಬೆಟ್ಟು ಶ್ರೀ ಮಹಮ್ಮಾಯಿ ವನದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಜಾತ್ರೋತ್ಸವವು ವೇ|ಮೂ| ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಜ.೨೬ರಂದು ಜರಗಲಿದೆ.
ಬೆಳಗ್ಗೆ ಪುಣ್ಯಾಹವಾಚನ, ನವಕಲಶಾರಾಧನೆ, ಮಹಾಚಂಡಿಕಾ ಯಾಗ, ಮಹಾಚಂಡಿಕಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ಭಜನೆ, ಶ್ರೀ ವನದುರ್ಗಾದೇವಿ ಭಜನಾ ಮಂಡಳಿ, ಮಿತ್ತಬೆಟ್ಟು ಇವರಿಂದ, ಹೂವಿನ ಪೂಜೆ, ದೀಪಾರಾಧನೆ,ಮಹಾಪೂಜೆ,ಶ್ರೀ ದೇವಿ ದರ್ಶನ,ಪ್ರಸಾದ ವಿತರಣೆ,ಅನ್ನಸಂತರ್ಪಣೆ, ರಾತ್ರಿ ಗಂಟೆ ೯ ರಿಂದ ಸರಪಾಡಿ ಬಾಚಕೆರೆ ಮೇಳದವರಿಂದ ಕದಂಬ ಕೌಶಿಕೆ ಕಾಲಮಿತಿ ಯಕ್ಷಗಾನ ಬಯಲಾಟ, ಬಳಿಕ ಪರಿವಾರ ದೈವಗಳಾದ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಎಂದು ಅಧ್ಯಕ್ಷ ಎನ್.ಮೋಹನ್ ಹೆಗ್ಡೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
