ಬಂಟ್ವಾಳ: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿದ್ದ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉಸ್ತಾದರ ಮಯ್ಯಿತ್ ನಮಾಝ್ ಗೆ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಶೈಖುನಾ ಶೈಖುಲ್ ಜಾಮಿಆ ಆಲಿಕುಟ್ಟಿ ಉಸ್ತಾದ್ ನೇತೃತ್ವ ನೀಡಿದರು. ದುಆ ನೇತೃತ್ವ ವನ್ನು ಶೈಖುನಾ ಮಾಣಿಯೂರ್ ಉಸ್ತಾದ್ ನೆರವೇರಿಸಿದರು.

ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಗೌರವಾರ್ಥ ಇಂದು ಅಂತ್ಯಕ್ರಿಯೆ ನಡೆಯುವವರೆಗೆ ಕೈಕಂಬ, ಶಾಂತಿಯಂಗಡಿಯ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಶೋಕಾಚರಣೆ ನಡೆಸಿದರು.