Tuesday, July 15, 2025

ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಕಬರ್ ಗೆ ಎಪಿ ಅಬೂಬಕರ್ ಮುಸ್ಲಿಯಾರ್ ಭೇಟಿ

ಬಂಟ್ವಾಳ: ಜ. 8ರಂದು ನಿಧನರಾದ ಹಿರಿಯ ಧಾರ್ಮಿಕ ಪಂಡಿತ, ಸಮಸ್ತ ಉಪಾಧ್ಯಕ್ಷರಾದ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಕಬರ್ ಗೆ ಅಖಿಲ ಭಾರತ ಸುನ್ನೀ ಜಂಮಿಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಗುರುವಾರ ರಾತ್ರಿ ಭೇಟಿ ನೀಡಿ ಝಿಯಾರತ್ ಮಾಡಿದರು.


ಬಳಿಕ ಝಿಕ್ರ್ ಪಠಿಸಿ, ಸಾಮೂಹಿಕ ಪಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅಶ್ರಫ್ ಸಾದಿ ಮಲ್ಲೂರು, ನೌಶಾದ್ ಸೂರಲ್ಪಾಡಿ, ಆಶಿಕ್ ಸಖಾಫಿ, ಮಿತ್ತಬೈಲ್ ಮಸೀದಿಯ ಅಧ್ಯಕ್ಷ ಹಬೀಬುಲ್ಲಾ, ಅದ್ದೇಡಿ, ಎಸ್‌.ಎಂ.ಮುಹಮ್ಮದ್ ಅಲಿ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಯೂಸುಫ್ ಕರಂದಾಡಿ, ಮುಹಮ್ಮದ್ ನಂದಾವರ, ಜಬ್ಬಾರ್ ಉಸ್ತಾದ್ ಅವರ ಮಕ್ಕಳು, ಆಡಳಿತ ಸಮಿತಿ ಸದಸ್ಯರು, ಉಸ್ತಾದರು, ಸಾರ್ವಜನಿಕರು ಹಾಜರಿದ್ದರು. ಎಪಿ ಉಸ್ತಾದ್ ಆಗಮನ ಹಿನ್ನೆಲೆಯಲ್ಲಿ ಮಸೀದಿ ವಠಾರದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.

More from the blog

ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಹಾಗೂ ವಾರ್ಷಿಕ ಸಭೆ..

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಹಾಗೂ ವಾರ್ಷಿಕ ಸಭೆ ಸೋಮವಾರ...

ನಿರಂತರ ಮಳೆ : ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ದಿನಾಂಕ 15.07.2025ರಂದು ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್...

ಒಡಿಯೂರು ಶ್ರೀ ಜನ್ಮದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ವಿಟ್ಲ : ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬದುಕಿನ ಉತ್ತುಂಗಕ್ಕೆ ಕಾರಣವಾಗುತ್ತದೆ. ಬದುಕು ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಋತುವಿಗನುಗುಣವಾಗಿ ಹಿತ, ಮಿತ ಆಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪಡೆಯಬಹುದು...

ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ- ಮಾಣಿಲಶ್ರೀ

ವಿಟ್ಲ: ನಮ್ಮ ಕಣ್ಣುಗಳಿಗೆ ಕಾಣದಿರುವ ಶಕ್ತಿಯೇ ದೇವರು. ದೇವರನ್ನು ಬಿಟ್ಟು ನಾವು ಯಾವ ಕಾರ್ಯವನ್ನೂ ಮಾಡಿದರೂ ನಿಷ್ಪ್ರಯೋಜಕ. ಉಸಿರು ಇದ್ದಷ್ಟು ದಿನ ಲೋಕಹಿತ ಕಾರ್ಯ ಮಾಡಬೇಕು. ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು...