ಬಂಟ್ವಾಳ: ಕಳೆದ 28 ವರ್ಷಗಳಲ್ಲಿ ಬಿಜೆಪಿ ಭದ್ರಕೊಟೆಯಾಗಿದ್ದ ದ.ಕ.ಜಿಲ್ಲೆಯಲ್ಲಿ ರಾಜಕೀಯ ವಾಗಿ ಮಹತ್ತರ ಬದಲಾವಣೆ ಆಗಬೇಕಾಗಿದೆ, ಈ ನಿಟ್ಟಿನಲ್ಲಿ ಯುವಕರು ಒಗ್ಗಟ್ಟಿನಿಂದ ಚುನಾವಣೆಯ ವರೆಗೆ ವಿಶ್ರಾಂತಿ ಪಡೆಯದೆ ಕೆಲಸ ಮಾಡಿ ಎಂದು ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ ಅವರು ಹೇಳಿದರು .
ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತ್ರತ್ವದಲ್ಲಿ ಇಂದು ಮಧ್ಯಾಹ್ನ ಬಡ್ಡಕಟ್ಟೆ ಹನುಮಂತ ದೇವಾಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಂಟ್ವಾಳ ಪೇಟೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ ಸಂಧರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಕ್ಕೆ, ನಂಬಿಕೆಗೆ , ಗೌರವಕ್ಕೆ ಯಾವುದೇ ದಕ್ಕೆ ಬಾರದ ರೀತಿಯಲ್ಲಿ ಎಲ್ಲರೂ ತಲೆ ಎತ್ತಿ ನಡೆಯುವಂತೆ, ದ.ಕ.ಜಿಲ್ಲೆಯ ನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೋತ್ತೇನೆ ಅದಕ್ಕೆ ಅವಕಾಶ ಮಾಡಿ ಕೊಡಿ ಎಂದರು.
ಈ ಬಾರಿಯ ಚುನಾವಣೆ ವ್ಯಯಕ್ತಿಕ ಹೋರಾಟ ಅಲ್ಲ ನಮ್ಮೆಲ್ಲರ ಚುನಾವಣೆ ಗೆಲುವೇ ನಮ್ಮ ಗುರಿಯಾಗಬೇಕು.
ಚುನಾವಣೆಯ ವರೆಗೂ ಬದಲಾವಣೆ ಯ ಮಂತ್ರ ಪ್ರತಿಯೊಬ್ಬ ಕಾರ್ಯಕರ್ತನ ಬಾಯಲ್ಲಿಯೂ ಬರಬೇಕಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ಅಭಿವೃದ್ಧಿ ಗಾಗಿ ಯುವಕ ಮಿಥುನ್ ರೈ ಅವರಿಗೆ ಬೆಂಬಲ ನೀಡಬೇಕು.
ದ.ಕ.ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತನೆ ಮಾಡಲು ನಿಮ್ಮ ಮತ ಕಾಂಗ್ರೇಸ್ ಗೆ ನೀಡಿ ಎಂದರು.
ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಕರ್ ಜೈನ್, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಅಬ್ಬಾಸ್ ಆಲಿ, ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಬೇಬಿ ಕುಂದರ್, ಸುದೀಪ್ ಶೆಟ್ಟಿ, ಬಿ.ಎಚ್.ಖಾದರ್, ಚಿತ್ತರಂಜನ್ ಶೆಟ್ಟಿ, ಜೆ.ಡಿ.ಎಸ್.ಪ್ರಮುಖರಾದ ಬಿ.ಮೋಹನ್, ಹಾರೂನ್ ರಶೀದ್, ಪಿ.ಎ.ರಹೀಂ ಮತ್ತಿತರರು ಹಾಜರಿದ್ದರು
