ಬಂಟ್ವಾಳ: ಕ್ಷೇತ್ರದ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಳಿಗೆ ಆದ್ಯತೆ ನೀಡಲಾಗಿದ್ದು ಈಗಾಗಲೇ 15ಕ್ಕೂ ಅಧಿಕ ಕ್ಷೇತ್ರಗಳ ರಸ್ತೆ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.


ಅವರು ಸುಮಾರು 2 ಕೋಟಿ ವೆಚ್ಚದಲ್ಲಿ ಸಜೀಪ ಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರ ಸಂಪರ್ಕ ರಸ್ತೆಯ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ನಂದಾವರ ಕ್ಷೇತ್ರಕ್ಕೆ ನದಿಬದಿಯಿಂದ ಸಂಪರ್ಕ ರಸ್ತೆಯ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗೊಳ್ಳುತ್ತದೆ ಎಂದು ತಿಳಿಸಿದರು.
ಸರಪಾಡಿ ದೇವಸ್ಥಾನದ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಬೆಳ್ಳೂರು ಕಾವೇಶ್ವರ ದೇವಸ್ಥಾನದ ರಸ್ತೆ ಸಂಪರ್ಕ ದ _ಬೇಡಿಕೆ ಯಿದ್ದು ಈಡೇರಿಸುವ ಭರವಸೆ ನೀಡಿದರು.
ಲಾಕ್ ಡೌನ್ ಸಮಯದಲ್ಲಿ ಸುಮಾರು 100 ಅಧಿಕ ರಸ್ತೆಗಳ ಕಾಮಗಾರಿ ಅಂತಿಮಗೊಂಡಿದ್ದು
ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸುತ್ತೇವೆ.
ಈ ಸಂದರ್ಭದಲ್ಲಿ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಸಜೀಪ ಮೂಡ ಗ್ರಾ.ಪಂ. ಸದಸ್ಯರಾದ
ಸೀತಾರಾಮ ಅಗೊಲಿಬೆಟ್ಟು
ಸೋಮನಾಥ ಬಂಗೇರ ಕಂದೂರು, ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು












