ಮೂಡಿಗೆರೆ: ಬಾಳೂರು ಠಾಣಾ ವ್ಯಾಪ್ತಿಯ ಬಲ್ಲಾಳ ರಾಯ ದುರ್ಗ ಹಾಗೂ ಭಂಡಾಜೆ ಫಾಲ್ಸ್ ಗೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಭಾನುವಾರ ಮುಂಜಾನೆ ಯುವಕರ ತಂಡವೊಂದು ಭಂಡಾಜೆ ಫಾಲ್ಸ್ ನೋಡಲು ತಂಡ ಹೊರಟಿತ್ತು ಅದರಂತೆ ತಂಡದ ಸದಸ್ಯರು ಚಾರಣ ಕೈಗೊಂಡು ಹಿಂತಿರುಗುವ ವೇಳೆ ತಂಡದಲ್ಲಿ ಓರ್ವನಾದ ಧನುಷ್ ಎಂಬಾತ ನಾಪತ್ತೆಯಾಗಿದ್ದ. ಧನುಷ್ ನಾಪತ್ತೆಯಾಗುತ್ತಿದ್ದಂತೆ ಈ ತಂಡದಲ್ಲಿದ್ದ ಓರ್ವ ಯುವಕ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ಪಡೆದುಕೊಂಡ ಪೊಲೀಸರ ತಂಡ ಧನುಷ್ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಂತೆ ಧನುಷ್ ನಾಪತ್ತೆಯಾದ ಸ್ಥಳದಿಂದ ಪೊಲೀಸರು ಮೂರೂ ತಂಡ ರಚಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾರ್ಯಾಚರಣೆ ಬಳಿಕ ಧನುಷ್ ದಟ್ಟ ಕಾಡಿನ ನಡುವೆ ಪತ್ತೆಯಾಗಿದ್ದಾನೆ
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೆಹಬೂಬ್ ಸಾಧನಿ ಶಂಕರ್ ಬೋವಿ ಹಾಗೂ ಸ್ಥಳೀಯರು ಜೊತೆಗಿದ್ದರು.