ಪುಂಜಾಲಕಟ್ಟೆ : ಪುಂಜಾಲಕಟ್ಟೆಯಿಂದ ನಾಪತ್ತೆಯಾದ ಯುವತಿ ಮದುವೆಯಾಗಿ ಬೆಂಗಳೂರಿನಲ್ಲಿ ತಿಂಗಳ ಬಳಿಕ ಪತ್ತೆಯಾದ ಘಟನೆ ನಡೆದಿದೆ.


ತಾಲ್ಲೂಕು ಮೂಡುಪಡುಕೋಡಿ ಗ್ರಾಮದ ಸೇವಾ ನಿವಾಸ ಉದಯ್ ಅವರ ಮಗಳುಬ
ಕುಮಾರಿ ದಿವ್ಯಶ್ರೀ ಪ್ರಾಯ(18) ಇವರು ಜ: 19 ರಂದು ಕಾಣೆಯಾದವರು. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕುಮಾರಿ ದಿವ್ಯಶ್ರೀ ಅವರ ತಾಯಿಯ ದೂರಿನಂತೆ ಠಾಣಾ ಅ ಕ್ರ :07/2019ರಂತೆ ಪ್ರಕರಣ ದಾಖಲಾಗಿತ್ತು. ಕುಮಾರಿ ದಿವ್ಯ ಶ್ರೀಯ ಮನೆ ಬಿಟ್ಟು ಹೋದಾಗ ಬರೆದ ಪತ್ರದಲ್ಲಿ “ನಾನು ಪ್ರೀತಿ ಹಿಂದೆ ಹೋಗುವುದಾಗಿ “ತಿಳಿಸಿದ್ದು ಇದರ ಆಧಾರದಲ್ಲಿ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಅವರು ವಿಚಾರಣೆ ನಡೆಸಿ ಆಕೆ ತಾನು ಪ್ರೀತಿಸಿದ ಹುಡುಗನ ಜೊತೆ ಬೆಂಗಳೂರಿನಲ್ಲಿ ಇರುವುದನ್ನು ಮಾಹಿತಿ ಕಲೆ ಹಾಕಿ ಪತ್ತೆ ಮಾಡಿ ಠಾಣೆಗೆ ಕರೆ ತಂದಿದ್ದಾರೆ.