ಮಂಗಳೂರು ಅ.18 (ಕ.ವಾ.):- ನಗರದ ಜೆಪ್ಪು ಕುಡ್ಪಾಡಿ ನಿವಾಸಿ ಗುಲ್ನಾಜ್ (21 ವರ್ಷ) ಎಂಬವರು ಇದೇ ಅ.6 ರಂದು ಕಾಣೆಯಾದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ಚಹರೆ ಇಂತಿವೆ:
5.2 ಅಡಿ ಎತ್ತರ, ಬುರ್ಖಾ ಧರಿಸಿರುತ್ತಾರೆ. ಬಿಳಿ ಮೈ, ಬಣ್ಣ, ದುಂಡು ಮುಖ, ಕಪ್ಪು ಕೂದಲು, ಸಾಧಾರಣ ಶರೀರ ಹೊಂದಿದ್ದಾರೆ. ಹಿಂದಿ ಮಾತನಾಡುತ್ತಾರೆ.
ಪತ್ತೆಯಾದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ದೂ.ಸಂ: 0824-2220800, ಪೊಲೀಸ್ ಇನ್‍ಸ್ಪೆಕ್ಟರ್ ಮೊ.ಸಂ: 9480805339, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮೊ.ಸಂ: 9480805346, ಪೊಲೀಸ್ ಠಾಣೆ ದೂ.ಸಂ: 0824-2220518 ಸಂಪರ್ಕಿಸುವಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.


