ಬಂಟ್ವಾಳ: ಕಂದಾಯ ಇಲಾಖೆಯಲ್ಲಿ ಹಲವು ಕಾಲ ಸೇವೆ ಸಲ್ಲಿಸಿದ ಆಹಾರ ಶಾಖೆಯ ಶಿರಸ್ತೇದಾರ್ ಶ್ರೀನಿವಾಸ್ ಹಾಗೂ ಬೆರಳಚ್ಚುಗಾರರಾದ ಸತ್ಯಶಂಕರಿಅವರಿಗೆ ಬೀಳ್ಕೊಡುಗೆ ಸಮಾರಂಭ ಬಂಟ್ವಾಳ ಮಿನಿ ವಿಧಾನಸೌಧದ
ಸಭಾಂಗಣದಲ್ಲಿ ಕುಮಾರಿ ನವ್ಯ ಎಸ್.ಎನ್ ರಾವ್ ಅವರ ಪ್ರಾರ್ಥನೆ ಯೊಂದಿಗೆ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ತಹಶೀಲ್ದಾರ್ ರಶ್ಮಿ ಎಸ್. ಆರ್. ಅವರು ಯಾವುದೇ ದೂರುಗಳು ಬಾರದಂತೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ ಆಹಾರ ಶಿರಸ್ತೇದಾರರಾದ ಶ್ರೀ ನಿವಾಸ್ ಮತ್ತು ಬೆರಳಚ್ಚುಗಾರರಾದ ಸತ್ಯಶಂಕರಿಯವರನ್ನು ಬೀಳ್ಕೊಡುತ್ತಿರುವುದು ಬಂಟ್ವಾಳ ತಾಲೂಕು ಕಛೇರಿಗೆ ತುಂಬಲಾರದ ನಷ್ಟ.ಅವರು ತಮ್ಮ ಸೌಮ್ಯ ಸ್ವಭಾವದಿಂದ ಎಲ್ಲಾ ಕೆಲಸಗಳನ್ನೂ ಸಮರ್ಪಕವಾಗಿ ನಿರ್ವಹಿಸುರುತ್ತಾರೆ.
ಇವರಿಬ್ಬರ ನಿವೃತ್ತಿ ಜೀವನ ಸುಗಮಯವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ ಅವರು ಮಾತಾನಾಡುತ್ತ ಶಿರಸ್ತೇದಾರ್ ಶ್ರೀನಿವಾಸ್ ಹಾಗೂ ಬೆರಳಚ್ಚು ಗಾರರಾದ ಸತ್ಯಶಂಕರಿಯವರ ಸರಳ ಸಜ್ಜನಿಕೆಯ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದರು.
ವೇದಿಕೆಯಲ್ಲಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಅಣ್ಣು ನಾಯ್ಕ್,
ಶ್ರೀ ನಿವಾಸರವರ ಧರ್ಮ ಪತ್ನಿ ವಿಜಯಲಕ್ಷ್ಮೀ, ಸತ್ಯ ಶಂಕರಿಯವರ
ಪತಿ ಮೋನಪ್ಪ ಗೌಡ ಉಪಸ್ಥಿತರಿದ್ದರು.ಗ್ರಾಮ ಲೆಕ್ಕಾಧಿಕಾರಿ ಜನಾರ್ದನ. ಜೆ ಸ್ವಾಗತಿಸಿ
ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ವಂದಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳು.ಗ್ರಾಮ ಲೆಕ್ಕಾಧಿಕಾರಿಗಳು.
ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
